ಭಾನುವಾರ, ಮೇ 9, 2021
27 °C

ಮಾನವೀಯತೆ ಮರೆತ ಅಧಿಕಾರಿ-ವರ್ತಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ದೇಶ ಕಂಡ ಅತ್ಯಂತ ಭೀಕರ ಮಹಾಮಳೆ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಶೋಧನೆ, ರಕ್ಷಣೆ ಹಾಗೂ ಪರಿಹಾರ ಕಾರ್ಯಗಳನ್ನು ಉತ್ತರಾಖಂಡ ಸರ್ಕಾರ ತ್ವರಿತವಾಗಿ ಕೈಗೊಂಡ ಬೆನ್ನಲ್ಲೇ, ಅಧಿಕಾರಿಗಳು ಮತ್ತು ವ್ಯಾಪಾರಿಗಳ ಇನ್ನೊಂದು ಕರಾಳ ಮುಖವೂ ಬಯಲಾಗಿದೆ.ಕೆಲವು ಸಂತ್ರಸ್ತರು ದುರಂತದಲ್ಲಿ ಬದುಕುಳಿದು ಸುರಕ್ಷಿತ ಸ್ಥಳ ಮತ್ತು ತಮ್ಮ ಮನೆಗಳನ್ನು ತಲುಪಿದರೂ ಅವರಿಗೆ ಇನ್ನೂ ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ಭಾವಶೂನ್ಯತೆ ಮತ್ತು ಮಾನವೀಯತೆಯ ಕೊರತೆಯನ್ನು ಮರೆಯಲಾಗುತ್ತಿಲ್ಲ.ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಸಹಾಯ ಮಾಡಲು ಬರುವುದಿರಲಿ, ಕೇದಾರನಾಥ ಮತ್ತಿತರ ಕಡೆಗಳಲ್ಲಿ ರಕ್ಷಣಾ ಹೆಲಿಕಾಪ್ಟರ್‌ಗಳು ಸ್ಥಳಕ್ಕೆ ಬಂದರೂ ಅವರಿಗೆ ಮಾರ್ಗದರ್ಶನ ತೋರಲು ಸಿಗಲಿಲ್ಲ. ಕೇದಾರ ಕಣಿವೆ, ಗೌರಿಕುಂಡ್, ರಂಬಾರ ಮುಂತಾದೆಡೆ ಭಾರಿ ಪ್ರವಾಹ ಬರುವ ಬಗ್ಗೆ ಅಧಿಕಾರಿಗಳು ಜನರಿಗೆ ಯಾವುದೇ ಮುನ್ಸೂಚನೆ ನೀಡಲಿಲ್ಲ ಮತ್ತು ಪ್ರಕೃತಿ ವಿಕೋಪಗಳ ನಿರ್ವಹಣೆಗೆ ಸಮರ್ಪಕ ಯೋಜನೆ ಮಾಡಲಿಲ್ಲ.ಕೆಲವು ಸಂತ್ರಸ್ತರು ಬಹಳಷ್ಟು ದೂರ ನಡೆದುಕೊಂಡು ಹೋಗಿ, ಖಾಸಗಿ ಟ್ಯಾಕ್ಸಿಗಳನ್ನು ಪಡೆದು, ಹೆಚ್ಚಿನ ಹಣ ತೆತ್ತು ಸಾಗಬೇಕಾಯಿತು. ದಾರಿಮಧ್ಯೆ ಸಿಕ್ಕ ಹೋಟೆಲ್ ಮತ್ತು ವ್ಯಾಪಾರದ ಅಂಗಡಿಗಳು ತಮಗೆ ಇಚ್ಛೆ ಬಂದಷ್ಟು ಬೆಲೆಗಳನ್ನು ಹೇಳಿ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಸುಲಿಗೆ ಮಾಡಿದರು.ಕೇವಲ ಒಂದು ಚಪಾತಿಗೆ ರೂ 40 ಮತ್ತು ಬಾಟಲ್ ನೀರಿಗೆ ರೂ 50-100 ಬೆಲೆ ತೆರಬೇಕಾಯಿತು. ಆಹಾರ ಮತ್ತಿತರ ವಸ್ತುಗಳನ್ನು ಖರೀದಿಸಿದ ಪ್ರವಾಸಿಗರನ್ನು ವ್ಯಾಪಾರಿಗಳು ಶೋಷಣೆ ಮಾಡಿದರು. ಆದರೆ ಇಂತಹ ದುಷ್ಟರ ನಡುವೆ ಕೆಲವು ಸಹೃದಯಿಗಳನ್ನು ಕೆಲವು ಸಂತ್ರಸ್ತರು ನೆನಪಿಸಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.