`ಮಾನವೀಯತೆ ಸಾರುವುದು ಪವಿತ್ರ ಕೆಲಸ'

7

`ಮಾನವೀಯತೆ ಸಾರುವುದು ಪವಿತ್ರ ಕೆಲಸ'

Published:
Updated:

ಕುಮಟಾ: `ಜಗತ್ತಿನಲ್ಲಿ ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ದೊಡ್ಡದ್ದಾಗಿದ್ದು, ಮಾನವೀಯತೆಯನ್ನು ಸಾರುವುದಕ್ಕಿಂತ ಪವಿತ್ರವಾದ ಕೆಲಸ ಇನ್ನೊಂದಿಲ್ಲ' ಎಂದು ಕ್ರೈಸ್ತ ಸಮುದಾಯದ ಮಹಾ ಧರ್ಮಾಧಿಕಾರಿ ಡಾ. ಬರ್ನಾಡ್  ಮೋರಸ್ ತಿಳಿಸಿದರು.ಸೋಮವಾರ ತಾಲ್ಲೂಕಿನ ಚಂದಾವರದ ಪಿಯಸ್ತಾ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯ ಪತ್ರಕರ್ತ ಜಿ ಯು ಭಟ್ಟ, `ಉ.ಕ. ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯ ಶಿಕ್ಷಣ, ಆರೋಗ್ಯಕ್ಕೆ ನೀಡಿದ ಕೊಡುಗೆ ಅಪಾರ. ಎಷ್ಟೋ ದೂರದಿಂದ ಬಂದ ಸಂತ ಜೇವಿಯರ್  ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಗಳಿಸಿದ ಪ್ರತೀಕವಾಗಿ ಅವರ ನೆನಪಲ್ಲಿ ಪ್ರತೀ ವರ್ಷ ಚಂದಾವರ್ ಪಿಯಸ್ತಾ ನಡೆಯುತ್ತದೆ. ಎಲ್ಲ ಮಹಾಪುರುಷರ ಅವಸಾನವೂ ಜಗತ್ತಿಗೆ ಅತ್ಯಮೂಲ್ಯ ಸಂದೇಶ ನೀಡುತ್ತದೆ' ಎಂದರು.ಸಭೆಯಲ್ಲಿ ಕಾರವಾರ ಡಯಾಸಿಸ್ ಧರ್ಮಾಧಿಕಾರಿ ಡಾ. ಡೆರಿಕ್ ಫರ್ನಾಂಡೀಸ್, ಫಾದರ್ ಡೇವಿಡ್‌ಪ್ರ್ರಕಾಶ್, ಫಾದರ್ ಆರ್ ಜಿ ಪ್ರಕಾಶ,  ಮೋಂಟಿ ಫರ್ನಾಂಡೀಸ್  ಇದ್ದರು. ಫಾದರ್ ಸಾಲ್ವೋದರ್ ತಂಡದವರಿಂದ ಪ್ರಾರ್ಥನಾ ನೃತ್ಯ ನಡೆಯಿತು.ಕಾರವಾರದ ಆಶಾ ನಿಕೇತನ ಮಕ್ಕಳಿಂದ ನೃತ್ಯ ಏರ್ಪಡಿಸಲಾಗಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ   ಹೊನ್ನಪ್ಪ ನಾಯಕ, ಡಿಸಿಸಿ ಸದಸ್ಯ ನಾಗೇಶ ನಾಯ್ಕ ಕಲಭಾಗ ಇದ್ದರು. ಫಾದರ್ ಸೈಮನ್ ಟೆಲ್ಲರ್ ಸಂದೇಶ ವಾಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry