ಶುಕ್ರವಾರ, ಮೇ 20, 2022
27 °C

ಮಾನವೀಯ ಮೌಲ್ಯ ಬೆಳೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಜನತೆ ಸಾಮಾಜಿಕ ಬದಲಾವಣೆಯತ್ತ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ದುಷ್ಟ ಪ್ರಕರಣಗಳು ನಡೆಯುತ್ತಿದೆ ಎಂದು  ಬಾಳೆಹೊನ್ನೂರಿನ ಶ್ರಿಮದ್ ರಂಭಾಪುರೀ ಪೀಠದ ಜಗದ್ಗುರು ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮಿಗಳು ಹೇಳಿದರು.  ಪಟ್ಟಣದಲ್ಲಿ ಶನಿವಾರ ಜರುಗಿದ ಹತ್ತನೇ ವರ್ಷದ ವಿಜಯದಶಮಿ ದಸರಾ ಉತ್ಸವದ ಸಾರ್ವಜನಿಕ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಮಾನವೀಯ ಮೌಲ್ಯಗಳನ್ನು ಕಡಿಮೆಯಾಗುತ್ತಿದೆ  ಇದರಿಂದ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗ ತೊಡಗಿವೆ. ಈ ಬಗ್ಗೆ ಜಾಗೃತಿ ಅಗತ್ಯ ಎಂದು ತಿಳಿಸಿದರು.

ದುಷ್ಟ ಶಕ್ತಿ ನಿಗ್ರಹ ಹಾಗೂ ದೈವಶಕ್ತಿಯ ಆರಾದನೆ ಮೂಲಕ ಶಾಂತಿ ಕಾಪಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಮಾಜ ಸೇವಕ ಕೆ.ಜಗದೀಶ್ ಮಾತನಾಡಿ ವಿಜಯದಶಮಿ ಸಮೃದ್ಧಿಯ ಸಂಕೇತವಾಗಿದು, ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಮನುಷ್ಯರನ್ನಾಗಿ ಮಾನವಂತ ಸಮಾಜ ನಿರ್ಮಾಣವಾಗಬೇಕೆಂದು ಎಂದು ಹೇಳಿದರು.  ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಚಾಲಕ ಜಗದೀಶ್ ಕಾರಂತ ಸಾಮೂಹಿಕ ವಿಜಯ ದಶಮಿಯ ವೀರ ಸಂದೇಶವನ್ನು ಜನತೆ ಸಾರಿದರು. ದೇಗುಲ ಮಠದ ಮುಮ್ಮಡಿ ಮಹಾಲಿಂಗಸ್ವಾಮಿ, ಮರಳೇಗವಿ ಮಠದ ಮುಮ್ಮಡಿ ಶಿವರುದ್ರಮಹಾಸ್ವಾಮಿ, ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಹರಗುರು ಜರಣರು ದಿವ್ಯ ಸಾನಿಧ್ಯವಹಿಸಿದ್ದರು.  ದಸರಾ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಜಯಕರ್ನಾಟಕ ಕುಮಾರಸ್ವಾಮಿ ಸ್ವಾಗತ ಭಾಷಣ ಮಾಡಿದರು. ಬಿ.ಜೆ.ಪಿ. ನಾಗರಾಜು, ಆರ್.ಶ್ರಿನಿವಾಸ್, ಎ.ಪಿ.ಕೃಷ್ಣಪ್ಪ, ಕೈಲಾಶ್ ಶಂಕರ್, ವೆಂಕಟೇಶ್, ನಾರಾಯಣಪುರ ನಾಗರಾಜು, ಕೋಟೆ ಕೃಷ್ಣ, ಮಂಜುನಾಥ್, ರಾಘವೇಂದ್ರ, ನಂಜುಂಡಿ, ನಾಗಾನಂದ್, ಮಹೇಶ್, ಮಹದೇವಸ್ವಾಮಿ, ಕೆಂಪಣ್ಣ ಸೇರಿದಂತೆ ಅನೇಕ ಪ್ರಮುಖರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.