ಮಾನವ ಅಕ್ರಮ ಸಾಗಣೆ ಆರೋಪ: ಅಮೆರಿಕ ಕಂಪೆನಿ ವಿರುದ್ಧ ದಾವೆ

7

ಮಾನವ ಅಕ್ರಮ ಸಾಗಣೆ ಆರೋಪ: ಅಮೆರಿಕ ಕಂಪೆನಿ ವಿರುದ್ಧ ದಾವೆ

Published:
Updated:

ಹ್ಯೂಸ್ಟನ್ (ಪಿಟಿಐ): ಅಮೆರಿಕದ ಕಂಪೆನಿಯೊಂದು ಭಾರತೀಯ ಅತಿಥಿ ಕೆಲಸಗಾರರನ್ನು ಅಕ್ರಮವಾಗಿ ಸಾಗಣೆ ಮಾಡುವ ಜೊತೆಗೆ ಅಮೆರಿಕದ ಪೌರತ್ವ ನೀಡುವುದಾಗಿ ಆಮಿಷವೊಡ್ಡಿದ್ದಲ್ಲದೆ, ಅವರನ್ನು ಬೆದರಿಸಿ ಕಾನೂನಿಗೆ ವಿರುದ್ಧವಾಗಿ ಅತಿಥಿ ಕೆಲಸಗಾರರ ವೀಸಾದಡಿ ಕೆಲಸ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕೆಲಸಗಾರರ ಪರ ಅಮೆರಿಕ ನಾಗರಿಕ ಸ್ವಾತಂತ್ರ್ಯ ಒಕ್ಕೂಟ (ಎಸಿಎಲ್‌ಯು) ಕಂಪೆನಿ ವಿರುದ್ಧ ಮೊಕದ್ದಮೆ ಹೂಡಿದೆ.2005ರಲ್ಲಿ ಸಂಭವಿಸಿದ ಕತ್ರೀನಾ ಚಂಡಮಾರುತ ದುರಂತದ ನಂತರ ಹಡಗು ನಿರ್ಮಾಣ ಕೆಲಸಗಳಿಗೆ ನೇಮಿಸಿಕೊಂಡಿರುವ ಕೆಲಸಗಾರರನ್ನು ಅಕ್ರಮ ಸಾಗಣೆ ಮಾಡಿರುವುದಲ್ಲದೆ ಸರಿಯಾಗಿ ವೇತನ ಪಾವತಿಸದೆ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ.ಸಿಗ್ನಲ್ ಇಂಟರ್‌ನ್ಯಾಷನಲ್ ಮತ್ತು ಅದರ ಸಹ ಕಂಪೆನಿಗಳು ಸರ್ಕಾರದ ಎಚ್-2ಬಿ ಅತಿಥಿ ಕೆಲಸಗಾರರು ಯೋಜನೆಯಡಿ  ಅಕ್ರಮವಾಗಿ ಸುಮಾರು 500ಕ್ಕೂ ಅಧಿಕ ಭಾರತೀಯ ಕೆಲಸಗಾರರಿಗೆ ಅಮೆರಿಕದ ಕಾಯಂ ಪೌರತ್ವ ಕೊಡಿಸುವ ಸುಳ್ಳು ಆಮಿಷವೊಡ್ಡಲಾಗಿದೆ. ಅಲ್ಲದೆ ಕಳಪೆ ಜೀವನ ಸೌಕರ್ಯ ಒದಗಿಸಿ, ವೇತನದಲ್ಲಿ ವಂಚನೆ ಮಾಡಿರುವುದಲ್ಲದೆ, ಅವರನ್ನು ಬೆದರಿಸುತ್ತಿದ್ದರು ಎಂದು ದೂರಲಾಗಿದೆ.ಕೆಲಸಗಾರರನ್ನು ಕೊಂಡುಕೊಂಡ ಹಡಗು ಕೈಗಾರಿಕಾ ಕಂಪೆನಿ ಸಿಗ್ನಲ್ ಇಂಟರ್‌ನ್ಯಾಷನಲ್ ಕೆಲಸಗಾರರ ಪಾಸ್‌ಪೋರ್ಟ್ ಮತ್ತು ವೀಸಾಗಳನ್ನು ವಶಪಡಿಸಿಕೊಂಡಿದೆ. ಉದ್ಯೋಗ ನೀಡಲು, ವಲಸೆ ಪ್ರಕ್ರಿಯೆ ಮತ್ತು ಸಾರಿಗೆ ವ್ಯವಸ್ಥೆಗಾಗಿ ಭಾರಿ ಮೊತ್ತದ ಹಣ ಪಾವತಿಸುವಂತೆ ಅವರನ್ನು ಒತ್ತಾಯಿಸಿದ್ದಾರೆ. ಕಂಪೆನಿಯ ಸಂಕೇತ-ನಿಯಂತ್ರಿತ ಅತಿಥಿ ಕೆಲಸಗಾರರ ವೀಸಾದಡಿ ಕೆಲಸ ಮಾಡದಿದ್ದಲ್ಲಿ ಕಠಿಣ ಕಾನೂನು ಮತ್ತು ದೈಹಿಕ ಹಿಂಸೆ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ.ಕಂಪೆನಿಯ ನಿಯಂತ್ರಣದಲ್ಲಿರುವ ಕಾರ್ಮಿಕರಿಂದ ತುಂಬಿರುವ ಶಿಬಿರದಲ್ಲಿ ಅವರು ವಾಸಿಸಬೇಕಾಗಿದ್ದು, ಮಾನಸಿಕವಾಗಿ ಅವರನ್ನು ಹಿಂಸಿಸಲಾಗುತ್ತಿದೆ. ಅಲ್ಲದೆ ಸಮರ್ಪಕ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ದೇಶದಲ್ಲಿ ಅತಿಥಿ ಕೆಲಸಗಾರರ ಹಕ್ಕುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ಎಸಿಎಲ್‌ಯು ಆಕ್ರೋಶ ವ್ಯಕ್ತಪಡಿಸಿದೆ.ಕೆಲಸಗಾರರೊಂದಿಗೆ ಕಂಪೆನಿ ವರ್ತಿಸಿದ ರೀತಿ ಟಿವಿಪಿಎ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.ವಿಶ್ವಸಂಸ್ಥೆಯ ವಲಸಿಗರ ವಿಶೇಷ ನಡವಳಿ ವರದಿಗಾರರು, ವರ್ಣಬೇಧ, ತಾರತಮ್ಯ, ಅನ್ಯದೇಶೀಯ ಮತ್ತು  ಮತ್ತಿತರ ಅಸಹಿಷ್ಣುತೆಗೆ ಸಂಬಂಧಿಸಿದ  ಒಕ್ಕೂಟದ ನಡವಳಿ ವರದಿಗಾರರು, ವಿಶ್ವಸಂಸ್ಥೆ ಮಾನವಹಕ್ಕುಗಳ ಉನ್ನತ ಅಧಿಕಾರಿಗಳ ಮುಂದೆ ಎಸಿಎಲ್‌ಯು ಮತ್ತು ಕೆಲಸಗಾರರು ಹಾಜರಾಗಿ ದೂರು ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry