ಮಂಗಳವಾರ, ಜೂನ್ 15, 2021
27 °C

ಮಾನವ ಸಫಾರಿ ನಿಲ್ಲಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್(ಪಿಟಿಐ): ಬ್ರಿಟನ್‌ ಮೂಲದ ಮಾನವ ಹಕ್ಕು ಸಂಘಟನೆ ಸರ್ವೈವಲ್ ಇಂಟರ್ ನ್ಯಾಷನಲ್ ಸಂಸ್ಥೆ , ಅಂಡ­ಮಾನ್ ದ್ವೀಪಗಳಲ್ಲಿ ಅಳಿವಿನ ಅಂಚಿನಲ್ಲಿರುವ  ಜಾರವಾ ಬುಡಕಟ್ಟಿನ  ತಾಣಗಳಲ್ಲಿ ಸಫಾರಿಯನ್ನು ಇನ್ನು ಒಂದು ವರ್ಷದಲ್ಲಿ ನಿಲ್ಲಿಸಬೇಕು ಎಂದು ಕಾಲಮಿತಿ ನಿಗದಿ ಮಾಡಿದೆ.  ಮುಂದಿನ ವರ್ಷದ ಮಾರ್ಚ್‌ನೊಳಗೆ,  ಅಭಯಾರಣ್ಯದ ಮೂಲಕ ಹೋಗುವ ಅಕ್ರಮ  ಮಾರ್ಗವನ್ನು ಬಿಟ್ಟು  ಪರ್ಯಾಯ ಸಮುದ್ರ ಮಾರ್ಗದ ಮೂಲಕ ಪ್ರವಾಸಿಗಳನ್ನು ಕರೆದೊಯ್ಯಬೇಕು  ಎಂದು ಅಂಡಮಾನ್ ಅಧಿಕಾರಿಗಳಲ್ಲಿ ಸಂಸ್ಥೆ ಮನವಿ ಮಾಡಿಕೊಂಡಿದೆ.  ಈಗ ನೂರಾರು  ಪ್ರವಾಸಿಗರು ಜಾರವಾಗಳು ಇರುವ ಕಾಡಿನ ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಸಮುದ್ರ ಮಾರ್ಗಕ್ಕೆ ಪರಿಸರ ಇಲಾಖೆ ಅನುಮತಿ ಸಿಕ್ಕದಿರುವುದರಿಂದ ಮಾರ್ಚ್ 2015ರ ಗಡುವು ಸಫಲವಾಗುವುದು ಕಷ್ಟ ಎಂದು ಹೇಳಿರುವ ಸರ್ವೈವಲ್ ಇಂಟರ್ ನ್ಯಾಷನಲ್, ಕೇಂದ್ರ ಪರಿಸರ ಸಚಿವ ವೀರಪ್ಪ ಮೊಯಿಲಿ ಮತ್ತು ಅಂಡಮಾನ್ ನಿಕೋಬಾರ್ ಲೆಫ್ಟಿನೆಂಟ್ ಗವರ್ನರ್ ಎ.ಕೆ. ಸಿಂಗ್ ಅವರಲ್ಲಿ ಈ ಕುರಿತು ಮನವಿ ಮಾಡಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.