ಬುಧವಾರ, ಜೂನ್ 16, 2021
28 °C

ಮಾನವ ಹಕ್ಕುಗಳ ಸೇವಾ ಸಂಸ್ಥೆ ಅಸ್ತಿತ್ವಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಸಂರಕ್ಷಿಸಲು, ಭ್ರಷ್ಟಾಚಾರದ ವಿರುದ್ಧ ದನಿಯಾಗಿ ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಲು ಮಾನವ ಹಕ್ಕುಗಳ ಸೇವಾ ಸಂಸ್ಥೆ ತಾಲ್ಲೂಕಿನಲ್ಲಿ ಅಸ್ತಿತ್ವಕ್ಕೆ ಬಂದಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸೇವಾ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಪಿ.ವಿ. ಭೋಜರಾಜ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ನೋಂದಾಯಿಸಿಕೊಂಡರೂ ಫಾರಂ 6ರ ಮೂಲಕ ಜನರಿಗೆ ಉದ್ಯೋಗ ನೀಡುವಲ್ಲಿ ಈ ಸರ್ಕಾರ ವಿಫಲವಾಗಿದೆ. ಇದರಿಂದ ಬಡಜನರು ಕೆಲಸ ಇಲ್ಲದೇ ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಿರು ಬೇಸಿಗೆಯ ಈ ದಿನಗಳಲ್ಲಿ ಜನರಿಗೆ ಉದ್ಯೋಗ ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮಾನವ ಹಕ್ಕುಗಳ ಸೇವಾ ಸಂಸ್ಥೆ ರಾಜಕೀಯೇತರವಾಗಿದ್ದು, ರಾಜ್ಯದ 25 ಜಿಲ್ಲೆಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಭ್ರಷ್ಟಾಚಾರ ನಿಮೂರ್ಲನೆ ಹೋರಾಟವೇ ಈ ಸಂಸ್ಥೆಯ ಮುಖ್ಯ ಧ್ಯೇಯ. ಏ. 23ರಂದು ಚನ್ನಗಿರಿ ಪಟ್ಟಣದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಹುಬ್ಬಳ್ಳಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಮಾವೇಶಕ್ಕೆ ಜಿಲ್ಲೆಯಿಂದ ನೂರಾರು ಖಾಸಗಿ ಬಸ್‌ಗಳು ಕಾರ್ಯಕರ್ತರನ್ನು ಕರೆದುಕೊಂಡು ಹೋಗಿವೆ.ಬಸ್‌ಗಳ ಕೊರತೆಯಿಂದ ಜನರು ಬೇರೆ ಊರುಗಳಿಗೆ ಹೋಗಲು ಹರಸಾಹಸಪಡುವಂತಾಗಿದೆ. ಇದನ್ನು ಈ ಸೇವಾ ಸಂಸ್ಥೆ ತೀವ್ರವಾಗಿ ಖಂಡಿಸುತ್ತದೆ ಎಂದರು.ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಂ.ಡಿ. ದೇವರಾಜ್ ಶಿಂಧೆ, ತಾಲ್ಲೂಕು ಅಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ, ಚಂದ್ರಮೌಳಿ, ಮಲ್ಲೇಶಪ್ಪ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಪದಾಧಿಕಾರಿಗಳ ವಿವರ:  ಮಾನವ ಹಕ್ಕುಗಳ ಸೇವಾ ಸಂಸ್ಥೆ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪಿ.ವಿ. ಭೋಜರಾಜ್ ಘೋಷಿಸಿದರು.

ಎಸ್. ಮಲ್ಲೇಶಪ್ಪ (ಗೌರವಾಧ್ಯಕ್ಷ), ಸಿ.ಆರ್. ನಾಗೇಂದ್ರಪ್ಪ (ಅಧ್ಯಕ್ಷ), ಪರಮೇಶ್ವರಪ್ಪ (ಉಪಾಧ್ಯಕ್ಷ), ಎಚ್. ರಾಜು (ಕಾರ್ಯದರ್ಶಿ), ಜೆ.ಪಿ. ಪ್ರಭು (ಸಹ ಕಾರ್ಯದರ್ಶಿ), ಎಚ್. ಸೋಮಶೇಖರಪ್ಪ (ಕಾನೂನು ಸಲಹೆಗಾರ), ಜಿ. ವಿಜಯಕುಮಾರ್, ಎ.ಕೆ. ದೇವರಾಜ್ (ಸಂಘಟನಾ ಕಾರ್ಯದರ್ಶಿ) ಹಾಗೂ ನಿರ್ದೆಶಕರಾಗಿ ಡಿ.ಎಸ್. ನಟರಾಜ್, ಸಿ.ಎಚ್. ರುದ್ರಪ್ಪ, ಎಂ.ಆರ್. ಶಿವಕುಮಾರ್, ರಂಗಸ್ವಾಮಿ, ಪುಟ್ಟಣ್ಣ, ಷಡಾಕ್ಷರಪ್ಪ ಆಯ್ಕೆಯಾಗಿದ್ದಾರೆ.

ಅಲ್ಪಸಂಖ್ಯಾತ ಘಟಕಕ್ಕೆ ಇರ್ಷಾದ್ ಖಾನ್ (ಅಧ್ಯಕ್ಷ), ಫೈರೋಜ್ ಖಾನ್ (ಉಪಾಧ್ಯಕ್ಷ), ಮಹಮದ್ ರಫೀವುದ್ದೀನ್ (ಕಾರ್ಯದರ್ಶಿ) ಹಾಗೂ ನಿರ್ದೇಶಕರಾಗಿ ಅಸಾದುಲ್ಲಾ, ಜಾವಿದ್ ಬಾಷಾ ಆಯ್ಕೆಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.