ಶುಕ್ರವಾರ, ಜೂನ್ 25, 2021
29 °C

ಮಾನವ ಹಕ್ಕು ಉಲ್ಲಂಘನೆ: ವಿಚಾರ ಸಂಕಿರಣ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯು.ಜಿ.ಸಿ. ಪ್ರಾಯೋಜಕತ್ವದಲ್ಲಿ `ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ~ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ವನ್ನು ಇದೇ 2 ಮತ್ತು 3 ರಂದು ಹಮ್ಮಿಕೊಳ್ಳಲಾಗಿದೆ.ಇದೇ 2ರಂದು ಬೆಳಿಗ್ಗೆ 10ಕ್ಕೆ ಕಾನೂನು ಹಾಗೂ ನಗರಾಭಿವೃದ್ಧಿ, ಸಂಸ ದೀಯ ವ್ಯವಹಾರಗಳ ಸಚಿವ ಸುರೇಶ ಕುಮಾರ ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗಾವಿಯ ಡಾ.ಡಿ.ವೈ. ಕುಲ ಕರ್ಣಿ, ಧಾರವಾಡದ ಡಾ.ಸಿ.ಎಸ್. ಪಾಟೀಲ, ಬೆಂಗಳೂರಿನ ಡಾ.ಶಾಮ ಸುಂದರ, ಡಾ.ಎಂ.ಎಸ್. ಅಶೋಕ, ಡಾ.ಕೆ.ಜಿ. ಹಿರೇಮಠ ವಿವಿಧ ವಿಷಯಗಳ ಮೇಲೆ ಮಾತನಾಡುವರು.ಶಿಕ್ಷಣ ತಜ್ಞರು, ಮಾನವ ಸಂಪ ನ್ಮೂಲ ರಕ್ಷಣಾ ವೃತ್ತಿನಿರತರು, ವಿದ್ಯಾ ರ್ಥಿಗಳು ಸೇರಿದಂತೆ 200 ಪ್ರತಿನಿಧಿಗಳು ಈ ಸಂಕಿರಣದಲ್ಲಿ ಭಾಗವಹಿಸುವರು. ಪ್ರಮುಖ ಮೂರು ಪ್ರಬಂಧಗಳಿಗೆ ವಿಶೇಷ ನಗದು ಬಹುಮಾನ ನೀಡಲಾಗು ವುದು ಎಂದು ಪ್ರಾಚಾರ್ಯ ಎಸ್.ಎಸ್. ಚೌಕಿಮಠ ತಿಳಿಸಿದ್ದಾರೆ.   ಮಾಹಿತಿಗಾಗಿ ಪ್ರೊ.ಬಿ.ಆರ್. ಅಲ್ಲಾಳ ಮಠ (ಮೊ.99 01114001) ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.