ಮಾನವ ಹಕ್ಕು ಉಲ್ಲಂಘನೆ: ಸಿರಿಯಾ, ಇರಾನ್, ಉ.ಕೊರಿಯಾಗೆ ಛೀಮಾರಿ

7

ಮಾನವ ಹಕ್ಕು ಉಲ್ಲಂಘನೆ: ಸಿರಿಯಾ, ಇರಾನ್, ಉ.ಕೊರಿಯಾಗೆ ಛೀಮಾರಿ

Published:
Updated:

ವಿಶ್ವಸಂಸ್ಥೆ (ಎಎಫ್‌ಪಿ): ಮಾನವ ಹಕ್ಕು ಉಲ್ಲಂಘನೆಗಾಗಿ ವಿಶ್ವಸಂಸ್ಥೆಯಲ್ಲಿ ಸಿರಿಯಾ, ಇರಾನ್ ಹಾಗೂ ಉತ್ತರ ಕೊರಿಯಾಗೆ ಛೀಮಾರಿ ಹಾಕಲಾಗಿದೆ.

ಸಿರಿಯಾ ಸರ್ಕಾರದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮಂಡಿಸಿದ ನಿರ್ಣಯದ ಪರವಾಗಿ 135 ಸದಸ್ಯ ರಾಷ್ಟ್ರಗಳು ಮತ ಹಾಕಿದವು. ರಷ್ಯಾ ಹಾಗೂ ಚೀನಾ ಸೇರಿ 12 ದೇಶಗಳು ನಿರ್ಣಯವನ್ನು ವಿರೋಧಿಸಿ ಮತ ಹಾಕಿದವು.36 ದೇಶಗಳು ಮತದಾನದಿಂದ ದೂರ ಉಳಿದವು. ಇರಾನ್ ವಿರುದ್ಧ ಮಂಡಿಸಿದ ಖಂಡನಾ ನಿರ್ಣಯಕ್ಕೆ 86 ದೇಶಗಳು ಅನುಮೋದಿಸಿದವು. 32 ರಾಷ್ಟ್ರಗಳು ನಿರ್ಣಯವನ್ನು ವಿರೋಧಿಸಿದರೆ, 65 ದೇಶಗಳು ತಟಸ್ಥವಾಗಿದ್ದವು. ವಿರುದ್ಧವಾಗಿ ಮತ ಹಾಕಿದ ರಾಷ್ಟ್ರಗಳಲ್ಲಿ ಭಾರತ, ಲೆಬನಾನ್, ಸುಡಾನ್ ಹಾಗೂ ದಕ್ಷಿಣ ಕೊರಿಯಾ ಕೂಡ ಸೇರಿವೆ.

ಮುಂಬೈ ದಾಳಿ: ಪಾಕ್ ವಿಚಾರಣೆ ಮುಂದಕ್ಕೆ

ಇಸ್ಲಾಮಾಬಾದ್ (ಪಿಟಿಐ): ಮುಂಬೈ ಭಯೋತ್ಪಾದಕ ದಾಳಿಯ ವಿಚಾರಣೆ ನಡೆಸುತ್ತಿರುವ ಇಲ್ಲಿನ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿ ಶನಿವಾರ ಆದೇಶಿಸಿದೆ.ಶಂಕಿತ ಏಳು ಭಯೋತ್ಪಾದಕರ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ. ಮುಂದಿನ ವಿಚಾರಣೆಯು ಜನವರಿ 12ರಂದು ನಡೆಯಲಿದೆ. ಆರೋಪಿಗಳ ಪರ ವಕೀಲರು ಮತ್ತು ಸರ್ಕಾರಿ ವಕೀಲರು ಶನಿವಾರದ ವಿಚಾರಣೆ ವೇಳೆ ಗೈರು ಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry