ಬುಧವಾರ, ಜೂನ್ 16, 2021
23 °C

ಮಾನವ ಹಕ್ಕು ಕಾರ್ಯಕರ್ತರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಕೊಲಂಬೊ (ಪಿಟಿಐ): ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಷಯಗಳನ್ನು ಪ್ರಚಾರ ಮಾಡುತ್ತಿರುವ ಆರೋಪದ ಮೇಲೆ, ಶ್ರೀಲಂಕಾ ಪೊಲೀಸರು ಸೋಮವಾರ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ  ಇಬ್ಬರು ಮಾನವ ಹಕ್ಕು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

 

ಜಾಫ್ನಾ ಮೂಲದ ‘ಶಾಂತಿ ಮತ್ತು ಸಾಮರಸ್ಯ ಕೇಂದ್ರ’ದ ನಿರ್ದೇಶಕ ಫಾದರ್ ಪ್ರವೀಣ್‌ ಮತ್ತು ಕೊಲಂಬೊ ಮೂಲದ ಮಾನವ ಹಕ್ಕುಗಳ ದಾಖಲೆ ಸಂಗ್ರಹಣಾ ಕೇಂದ್ರವಾದ ‘ಇನ್‌ಫಾರ್ಮ್‌’ನ ರುಖಿ ಫರ್ನಾಂಡೊ ಬಂಧಿತರು.

 

ಎಲ್‌ಟಿಟಿಇ ವಿರುದ್ಧ ದೇಶದಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ಯುದ್ಧದಿಂದ ಹಾನಿಗೀಡಾದ ಪ್ರದೇಶವಾದ  ಕಿಲಿನೊಚ್ಚಿಯಲ್ಲಿ ಈ ಇಬ್ಬರನ್ನು ಪೊಲೀಶರು ವಶಕ್ಕೆ ಪಡೆದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.