ಶುಕ್ರವಾರ, ಜನವರಿ 24, 2020
22 °C

ಮಾನವ ಹಕ್ಕು ಜನಜಾಗೃತಿರ್‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ  ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮಂಗಳವಾರ ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ  ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ ಜಿಲ್ಲಾ ಸಮಿತಿ ದ್ವಿಚಕ್ರ ವಾಹನ ರ್‍್ಯಾಲಿ ನಡೆಸಿತು.ಡಾ.ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಸಾಗಿದ ರ್‍್ಯಾಲಿ ಬಳಿಕ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿ ರ್‍್ಯಾಲಿ ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಚಂದ್ರಕಾಂತ, ಎಲ್ಲರೂ ಸಮಾನರು ಮತ್ತು ಸ್ವತಂತ್ರರಾ­ಗಿದ್ದಾರೆ. ಪ್ರತಿ ವ್ಯಕ್ತಿಗೂ ಬದುಕುವ ಹಕ್ಕು ಇದೆ.

ವ್ಯಕ್ತಿಯ ಬದುಕಿನ ಹಕ್ಕು, ಇತರರ ಹಕ್ಕಿಗೆ ಚ್ಯುತಿ ಆಗಬಾರದು. ತಾನು ಬದುಕಿ ಇತರರು ಬದುಕಲು ಅವಕಾಶ ಮಾಡಿಕೊಡುವಂತಾದರೆ ಮನುಷ್ಯನ ಬದುಕಿಗೆ ನಿಜವಾದ ಅರ್ಥವಿರುತ್ತದೆ ಎಂದು ಹೇಳಿದರು. ಉಮೇಶ ಡಿ.ಆರ್, ಶರಣಬಸವ, ಬಿ ಆಂಜನೇಯ, ಎಂ.ಬಿ ನರಸಿಂಹಲು ವಡವಾಟಿ, ಶಂಕರಗೌಡ ಶಿವನೂರು, ನವೀನ್ ಪಾಟೀಲ್, ಅಶೋಕ ಅರೋಲಿಕರ್, ಶರಣಬಸವ ಕುರ್ಡಿ, ವೆಂಕಟೇಶ, ಮಲ್ಲಿಕಾರ್ಜು, ಗಂಗಪ್ಪ ಮರ್ಚೆಡ್, ಮಹಾಂತೇಶ ಹಿರೇಮಠ, ರವಿಕುಮಾರ ರಾಂಪುರ, ಶಂಕರ್, ಶೇಖರ ಸರಾಫ್, ದೇವರಾಜ, ಗೋಪಾಲಕೃಷ್ಣ, ಮುರುಗೇಶ, ನಾಗರಾಜ ಕಲ್ಮಲಾ, ಬಸವರಾಜ­ಸ್ವಾಮಿ, ರಮೇಶ, ದೇವರಾಜಗೌಡ ಮುಂತಾದವರಿದ್ದರು.

ಪ್ರತಿಕ್ರಿಯಿಸಿ (+)