ಮಾನವ ಹಕ್ಕು: ನೇಮಕಕ್ಕೆ ಲಾಬಿ

7

ಮಾನವ ಹಕ್ಕು: ನೇಮಕಕ್ಕೆ ಲಾಬಿ

Published:
Updated:

ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿರುವ ಬೆನ್ನಿಗೇ, ಲಾಬಿ ಪ್ರಕ್ರಿಯೆಯೂ ಆರಂಭವಾಗಿದೆ.ಕೇಂದ್ರ ಸರ್ಕಾರ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲು ಒಟ್ಟು 23 ಜನರ ಹೆಸರುಳ್ಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಪಿ.ಸಿ. ಶರ್ಮ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನಕ್ಕೆ ಈ 23 ಮಂದಿಯಲ್ಲಿ ಒಬ್ಬರು ನೇಮಕಗೊಳ್ಳಲಿದ್ದಾರೆ.ಈಗ ಬೆಂಗಳೂರಿನಲ್ಲಿರುವ ಒಬ್ಬ ಅಧಿಕಾರಿಯ ಪರವಾಗಿ ಕೇಂದ್ರದ ಇಬ್ಬರು ಸಚಿವರು ಲಾಬಿ ಆರಂಭಿಸಿದ್ದಾರೆ. ಆಯೋಗದ ಸದಸ್ಯ ಸ್ಥಾನಕ್ಕೆ ಈ ಅಧಿಕಾರಿ ಸಿದ್ಧಪಡಿಸಿರುವ ಅರ್ಜಿಯನ್ನು ಸಚಿವರು ಹಾಗೂ ಅವರ ಆಪ್ತ ಕಾರ್ಯದರ್ಶಿಯವರು ಸರ್ಕಾರಕ್ಕೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry