ಭಾನುವಾರ, ಜುಲೈ 25, 2021
26 °C

ಮಾನಸಾ, ವಿಯಾನಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಂಗಳೂರಿನ ಅಂಟಾನಿಯೊ ವಿಯಾನಿ ಡಿಕುನ್ಹ, ನಗರದ ರೋವರ್ಸ್ ಕ್ಲಬ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ 19 ವರ್ಷದೊಳಗಿನವರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.ಶಿವಮೊಗ್ಗ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ, ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ವತಿಯಿಂದ ನಡೆದ ಎರಡು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ ವಿಯಾನಿ ಆರು ಸುತ್ತುಗಳಿಂದ 5 ಪಾಯಿಂಟ್ಸ್ ಸಂಗ್ರಹಿಸಿದರು.  ಶಿವಮೊಗ್ಗದ ಎಸ್.ಶ್ರೀಶನ್, ಡಿ.ಯಶಸ್, ಮಡಿಕೇರಿಯ ಎ.ಆಗಸ್ಟಿನ್ ಕ್ರಮವಾಗಿ ಎರಡರಿಂದ ನಾಲ್ಕರವರೆಗಿನ ಸ್ಥಾನ ಪಡೆದರು.ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಎಚ್.ಆರ್.ಮಾನಸಾ (5 ಸುತ್ತುಗಳಿಂದ 4.5 ಪಾಯಿಂಟ್) ಮೊದಲ ಸ್ಥಾನ ಪಡೆದರು. ಮಂಗಳೂರಿನ ಆಂಡ್ರಿಯಾ ಎಲ್.ಡಿಸೋಜ ಎರಡನೇ, ಮೈಸೂರಿನ ಬಿ.ಎನ್.ಗಂಗಮ್ಮ ಮೂರನೇ, ಮಂಗಳೂರಿನ ಪಂಚಮಿ ಶೆಣೈ ನಾಲ್ಕನೇ ಸ್ಥಾನ ಗಳಿಸಿದರು.ಜುಲೈ 8 ರಿಂದ ಲಖನೌದಲ್ಲಿ ನಡೆಯಲಿರುವ 19 ವರ್ಷದೊಳಗಿನ ರಾಷ್ಟ್ರೀಯ ಚಾಂಪಿಯನ್‌ಷಿಪ್ನಲ್ಲಿ ಮೇಲ್ಕಂಡ ಚೆಸ್ ಆಟಗಾ ರರು ಭಾಗವಹಿಸುವ ಅರ್ಹತೆ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.