ಮಂಗಳವಾರ, ಜನವರಿ 21, 2020
29 °C

ಮಾನಸಿಕ ಅಸ್ವಸ್ಥನ ತೊಳಲಾಟ

ಪ್ರಜಾವಾಣಿ ವಾರ್ತೆ/ಜಗನ್ನಾಥ ಶೇರಿಕಾರ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಈ ಬಾಲಕನಿಗೆ 9 ವರ್ಷ ವಯಸ್ಸು. ಆದರೂ ಮಾತ ನಾಡಲು ಬರುವುದಿಲ್ಲ. ಆಡಿದ ಮಾತುಗಳು ತಿಳಿಯುವುದಿಲ್ಲ. ಊಟ ತಿಂಡಿ ತನ್ನ ಕೈಯ್ಯಾರೆ ತಿನ್ನುವುದಿಲ್ಲ. ಮೈಮೇಲಿನ ಬಟ್ಟೆಯ ಪ್ರಜ್ಞೆಯೂ ಇವನಿಗೆ ಇರುವುದಿಲ್ಲ. ಕೈಗೆ ಸಿಕ್ಕಿದ್ದನ್ನೆಲ್ಲ ಬಾಯಿಗೆ ಹಾಕಿಕೊಳ್ಳುತ್ತಾನೆ..–ಇದು, ತಾಲ್ಲೂಕಿನ ನಾಗರಾಳ್‌ ಗ್ರಾಮದ ಶಿವಾನಂದ ಕಟ್ಟಿಮನಿಯ ಕಥೆ–ವ್ಯಥೆ.ಶಿವಾನಂದ ಎಂದು ತಂದೆ–ತಾಯಿ ಖುಷಿಯಿಂದಲೇ ನಾಮಕರಣ ಮಾಡಿದರೂ ಇವನಿಗಾಗಲಿ ಅಥವಾ ಈತನ ಮನೆಯವರಿಗಾ ಗಲಿ ಆನಂದವೇ ಇಲ್ಲದಂತಾಗಿದೆ!ಈ ಬಾಲಕನನ್ನು ಸಂಭಾಳಿಸು ವುದೇ ಪಾಲಕರಿಗೆ ದೊಡ್ಡ ಸಮಸ್ಯೆ. ಬಡತನದ ಬೇಗೆಯಿಂದ ತತ್ತರಿಸಿದ ಈ ಕುಟುಂಬ ದುಡಿದರೆ ಹೊಟ್ಟೆಗೆ ಹಿಟ್ಟು, ಇಲ್ಲದಿದ್ದರೆ ತಣ್ಣೀರು ಎನ್ನುವ ಸ್ಥಿತಿ ಇವರದ್ದು.ಇಂತಹ ದಯನೀಯ ಸ್ಥಿತಿಯಲ್ಲಿ ಶಿವಾನಂದ ಒಬ್ಬನನ್ನೇ ಮನೆಯ ಹೊರಗೆ ಬಿಡುವ ಹಾಗಿಲ್ಲ. ಈತನನ್ನೇ ಕಾಯುತ್ತ ಕುಳಿತಕೊಂಡರೆ ಹೊಟ್ಟೆ ತುಂಬುವುದಿಲ್ಲ. ಏನೂ ಆಗದು ಎಂದು ಧೈರ್ಯ ತಂದುಕೊಂಡರೆ ಹತ್ತಿರದಲ್ಲಿಯೇ ತಲೆ ಎತ್ತಿನಿಂತ ಬೃಹತ್‌ ಜಲಾಶಯ ಭಯ ಹುಟ್ಟಿ ಸುತ್ತಿದೆ. ಹೀಗಾಗಿ, ಮನೆಯ ಮುಂದಿನ ಚಪ್ಪರದ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕುವುದು ಪಾಲಕರಿಗೆ ಅನಿವಾರ್ಯ ವಾಗಿದೆ. ಇವನನ್ನು ಕಟ್ಟಿ ಹಾಕಲು ಪಾಲಕರಿಗೆ ಇಚ್ಛೆಯಿಲ್ಲ. ಆದರೆ, ವಿಧಿಯಿಲ್ಲ ಎನ್ನುತ್ತಾರೆ ಬಾಲಕನ ತಂದೆ ಸುಭಾಷ ಕಟ್ಟಿಮನಿ.ಈ ಬಾಲಕ ಒಂದೇ ಸಮನೆ ತನ್ನ ಕೈಯಿಂದ ತಲೆಗೆ ಹೊಡೆದುಕೊಳ್ಳು ತ್ತಿರುತ್ತಾನೆ. ತಮ್ಮಿಂದ ಸಾಧ್ಯವಾ ದಷ್ಟು ಚಿಕಿತ್ಸೆಯನ್ನು ಪಾಲಕರು ಕೊಡಿಸಿದ್ದಾರೆ. ಆದರೆ,  ಪ್ರಯೋಜನ ವಾಗಿಲ್ಲ. ಅನೇಕರು ಬಂದು ಫೋಟೊ ತೆಗೆದುಕೊಂಡು ಹೋಗಿ ದ್ದಾರೆ. ಆದರೆ, ಇದರೆಗೂ ಸರ್ಕಾರ ಅಥವಾ ಸಂಘ–ಸಂಸ್ಥೆಗಳಿಂದ ನೆರವು ದೊರಕಿಲ್ಲ ಎಂದು ತಾಯಿ ನೀಲಮ್ಮಾ ಅಳಲು ತೋಡಿಕೊಳ್ಳುತ್ತಾರೆ.ಒಂದೆಡೆ ಬಡತನ ಇನ್ನೊಂದೆಡೆ ಮಾನಸಿಕ ಅಸ್ವಸ್ಥ ಬಾಲಕನ ನೋಡಿ ಕಣ್ಣೀರಿನಲ್ಲಿ ಕೈತೊಳೆಯು ಕುಟುಂಬ ಕೂಲಿಯನ್ನೇ ಅವಲಂಭಿಸಿದೆ. ಮಾನಸಿಕ ಅಸ್ವಸ್ಥ ಮಕ್ಕಳಿಗೂ ಮಾಸಾಶನ ಮಂಜೂರಿಗೆ ಅವಕಾಶ ವಿದೆ. ಆದರೆ ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿ ಗಳು ಇದಕ್ಕೂ ನಮಗೂ ಸಂಬಂಧ ಇಲ್ಲವೆಂದು ಭಾವಿಸಿದಂತಿದೆ ಎನ್ನುವುದು ಸ್ಥಳೀಯರ ಆರೋಪ.‘ಎಲ್ಲರಂತೆ ನಮ್ಮ ಮಗನೂ ಓಡಾಡಿ ಕೊಂಡಿರಬೇಕು. ನಗುತ್ತ ಆಟವಾಡ ಬೇಕು.ಎಲ್ಲರೊಂದಿಗೆ ಬೆರೆಯ ಬೇಕೆಂಬ ಆಸೆ ಇವರಿಗೂ ಇದೆ. ಆದರೆ, ಏನು ಮಾಡ ದಂತಹ ಅಸಹಾಯಕ ಸ್ಥಿತಿಗೆ ಒಳಗಾಗಿದ್ದಾರೆ. ಹೀಗಾಗಿ ಈ ದಲಿತ ಬಾಲಕನ ಕುಟುಂಬಕ್ಕೆ ಸರ್ಕಾರದ ಸಹಾಯ ಹಸ್ತದ ಅಗತ್ಯವಿದೆ ಎನ್ನುತ್ತಾರೆ’ ಶಿಕ್ಷಕ ವಿಜಯಭರತ ಬಸಂತಪುರಕರ್‌.

 

ಪ್ರತಿಕ್ರಿಯಿಸಿ (+)