ಮಾನಸಿಕ ಅಸ್ವಸ್ಥೆ ಮೇಲೆ ಆಸ್ಪತ್ರೆಯಲ್ಲಿ ಅತ್ಯಾಚಾರ

7

ಮಾನಸಿಕ ಅಸ್ವಸ್ಥೆ ಮೇಲೆ ಆಸ್ಪತ್ರೆಯಲ್ಲಿ ಅತ್ಯಾಚಾರ

Published:
Updated:

ಪುಣೆ (ಪಿಟಿಐ): ಇಲ್ಲಿಗೆ ಸಮೀಪದ ಭೋಸರಿಯಲ್ಲಿನ ಮುನ್ಸಿಪಲ್ ಆಸ್ಪತ್ರೆಯ ಲಿಫ್ಟ್‌ನಲ್ಲಿ ಮಾನಸಿಕವಾಗಿ ಅಸ್ವಸ್ಥಳಾದ ಯುವತಿಯ ಮೇಲೆ ಆಸ್ಪತ್ರೆಯ ವಾರ್ಡ್‌ಬಾಯ್ ಹಾಗೂ ಗಾರ್ಡ್ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಇತ್ತಿಚೆಗೆ ನಡೆದಿದೆ. ಅತ್ಯಾಚಾರ ನಡೆಸಿದ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.ನಿರಾಶ್ರಿತರ ಕೇಂದ್ರವೊಂದರಲ್ಲಿ ವಾಸಿಸುತ್ತಿದ್ದ ಮೂವತ್ತು ವರ್ಷದ ಮೂಗಿ ಯುವತಿಯನ್ನು ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಸ್ಟ್ 26ರಂದು ದಾಖಲಿಸಲಾಗಿತ್ತು. ಆ.29ರಂದು  ಮತ್ತೊಂದು ವಾರ್ಡ್‌ಗೆ ಕರೆದೊಯ್ಯುತ್ತಿರುವುದಾಗಿ ಯುವತಿಯನ್ನು ನಂಬಿಸಿ ಲಿಫ್ಟ್‌ನಲ್ಲಿ ವಾರ್ಡ್‌ಬಾಯ್ ಹಾಗೂ ಗಾರ್ಡ್  ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಆಸ್ಪತ್ರೆಯಿಂದ ನಿರಾಶ್ರಿತರ ಕೇಂದ್ರಕ್ಕೆ ತೆರಳಿದ ಯುವತಿ ಅಲ್ಲಿನ ಪಾಲಕರಿಗೆ ತಾನು ಅತ್ಯಾಚಾರಕ್ಕೊಳಗಾದ ವಿವರವನ್ನು ಸನ್ನೆ ಮೂಲಕ ತಿಳಿಸಿದ್ದಾಳೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry