ಮಾನಸಿಕ ಆರೋಗ್ಯ: ಮುಂಚೂಣಿಯಲ್ಲಿ ವಿಕಿಪೀಡಿಯಾ
ಸಿಡ್ನಿ (ಐಎಎನ್ಎಸ್): ಮಾನಸಿಕ ಆರೋಗ್ಯ ಮಾಹಿತಿ ಪೂರೈಕೆಯಲ್ಲಿ ವಿಕಿಪೀಡಿಯಾ ಇನ್ನಿತರ ಮಾಹಿತಿ ಮೂಲಗಳಿಗಿಂತ ಅಗ್ರಸ್ಥಾನದಲ್ಲಿದೆ ಎಂದು ಅಧ್ಯಯನವೊಂದು ಹೇಳಿದೆ.
ಖಿನ್ನತೆ ಮತ್ತು ಸ್ಕಿಜೊಫ್ರೇನಿಯಾಗೆ ಸಂಬಂಧಿಸಿದ ಮಾಹಿತಿಯನ್ನು ವಿವಿಧ ಮೂಲಗಳಿಂದ ಕಲೆ ಹಾಕಿ ಈ ಅಧ್ಯಯನ ನಡೆಸಲಾಗಿತ್ತು. ವಿಕಿಪೀಡಿಯ, ಎನ್ಸೈಕ್ಲೊಪೀಡಿಯ, ಬ್ರಿಟಾನಿಕಾ, ಮನೋರೋಗ ಚಿಕಿತ್ಸಾ ಪಠ್ಯಪುಸ್ತಕ, ಮುದ್ರಣ ಮಾಹಿತಿ ಹೀಗೆ ಹತ್ತು ಹಲವು ಮೂಲಗಳಿಂದ ಸಂಗ್ರಹಿಸಿದ್ದ ಮಾಹಿತಿಗಳು ಇದರಲ್ಲಿದ್ದವು ಎಂದು ಮೆಲರ್ನ್ ವಿಶ್ವವಿದ್ಯಾಲಯದ ಸಂಶೋಧಕರು ವಿವರಿಸಿದ್ದಾರೆ.
ವಿಷಯದ ಕುರಿತ ಖಚಿತತೆ, ಸಮಕಾಲೀನ ಬೆಳವಣಿಗೆಗಳು, ಅದರ ಆಳ-ಹರವು, ಓದಿಸಿಕೊಂಡು ಹೋಗುವ ಗುಣ ಇತ್ಯಾದಿಗಳನ್ನು ಗಮನಿಸಿದಾಗ ವಿಕಿಪೀಡಿಯಾ ಇನ್ನಿತರ ಮಾಹಿತಿ ಮೂಲಗಳಿಗಿಂತ ಮುಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಬರಹ ಇಷ್ಟವಾಯಿತೆ?
0
0
0
0
0