ಮಾನಸಿಕ ನೆಮ್ಮದಿ ಮುಖ್ಯ

7

ಮಾನಸಿಕ ನೆಮ್ಮದಿ ಮುಖ್ಯ

Published:
Updated:

ಮಹದೇವಪುರ: `ಜೀವನದಲ್ಲಿ ಮಾನಸಿಕ ನೆಮ್ಮದಿ ಮುಖ್ಯ. ಆ ನೆಮ್ಮದಿಯನ್ನು ದೈವಾರಾಧನೆಯಿಂದ ಮಾತ್ರ ಹೆಚ್ಚಾಗಿ ಪಡೆದುಕೊಳ್ಳಲು ಸಾಧ್ಯ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟರು.ಸಮೀಪದ ಚನ್ನಸಂದ್ರ ಗ್ರಾಮದಲ್ಲಿ ಶತಾಯುಷಿ ಎಂ.ಅಬ್ಬಯ್ಯ ಮತ್ತು ಮುತ್ತಮ್ಮ ದಂಪತಿ ನೂತನವಾಗಿ ಸಂಸ್ಥಾಪಿಸಿದ ಸತ್ಯನಾರಾಯಣ ಸ್ವಾಮಿ ದೇವಾಲಯವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯರು ದೇವರಿಗೆ ಉನ್ನತ ಸ್ಥಾನವನ್ನು ಕೊಟ್ಟಿದ್ದಾರೆ. ಕಾರಣ ದೈವಶಕ್ತಿಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ ಎಂದರು.ಶಾಸಕ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸಿದ್ದರು. ಬಿಬಿಎಂಪಿ ಸದಸ್ಯ ಎನ್.ಆರ್.ಶ್ರೀಧರ್ ರೆಡ್ಡಿ, ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರ ರೆಡ್ಡಿ, ಉಪಾಧ್ಯಕ್ಷರಾದ ಸಿ.ಎ.ಚಂದ್ರಶೇಖರ್, ಹೂಡಿ ಎಂ.ವಿಜಯಕುಮಾರ್, ಕಲಾವಿದ ಆಲೂರು ನಾಗಪ್ಪ, ಹಗದೂರು   ವಾರ್ಡ್ ಯುವ ಮೋರ್ಚಾ ಘಟಕದ ಅಧ್ಯಕ್ಷ ಜೆ.ರಘು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry