ಭಾನುವಾರ, ಮೇ 16, 2021
27 °C

ಮಾನಸ ಸರೋವರ ಯಾತ್ರೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಉತ್ತರಾಖಂಡದಲ್ಲಿ ಉಂಟಾಗಿರುವ ಜಲಪ್ರಳಯದಿಂದಾಗಿ 2ರಿಂದ 10ನೇ ತಂಡದವರೆಗೆ ಒಟ್ಟು ಎಂಟು ತಂಡಗಳ  ಕೈಲಾಸ ಮಾನಸಸರೋವರ ಯಾತ್ರೆಯನ್ನು ಸರ್ಕಾರ ರದ್ದು ಮಾಡಿದೆ. ಮಾನಸಸರೋವರಕ್ಕೆ ಹೋಗುವ ಅಲ್ಮೋರ ರಸ್ತೆ ಹಾಗೂ ತವಾಘಾಟ್ ಮಾರ್ಗದ ಕೆಲ ರಸ್ತೆಗಳು ನಾಶವಾಗಿದ್ದು, ಪ್ರಮುಖ ಸೇತುವೆಗಳಿಗೆ ಹಾನಿಯಾಗಿದೆ.ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ. ಈ ಕಾರಣದಿಂದ ಪ್ರಸಕ್ತ ವರ್ಷದ 2ರಿಂದ 10ನೇ ತಂಡದವರೆಗಿನ ಯಾತ್ರೆಯನ್ನು ರದ್ದು ಮಾಡಲಾಗಿದೆ. ಹಾನಿಗೊಳಗಾಗಿರುವ ಸ್ಥಳಗಳಲ್ಲಿ ಪರಿಹಾರ ಕಾರ್ಯಾಚರಣೆಯನ್ನು  ಕೈಗೊಳ್ಳಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.