ಮಾನ್ಯತೆ ನವೀಕರಣ:ಸೀಟುಗಳ ಸಂಖ್ಯೆ ಹೆಚ್ಚಳ

ಮಂಗಳವಾರ, ಜೂಲೈ 23, 2019
25 °C

ಮಾನ್ಯತೆ ನವೀಕರಣ:ಸೀಟುಗಳ ಸಂಖ್ಯೆ ಹೆಚ್ಚಳ

Published:
Updated:

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೊಪಥಿ, ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.ಈ ಮುಂಚೆ ತಡೆ ಹಿಡಿಯಲಾಗಿದ್ದ ಕೆಲವೊಂದು ಕಾಲೇಜುಗಳ ಮಾನ್ಯತೆಯನ್ನು ನವೀಕರಿಸಲಾಗಿದೆ. ಇದರಿಂದಾಗಿ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪರಿಷ್ಕೃತ ಸೀಟು ಹಂಚಿಕೆ ಪಟ್ಟಿ ಮತ್ತು ಕೋರ್ಸ್‌ಗಳ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.ಶಿವಮೊಗ್ಗದ ತಡಿಕೆಲ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ನ 38 ಸೀಟುಗಳು, ನಗರದ ಇಎಸ್‌ಐ ವೈದ್ಯಕೀಯ ಕಾಲೇಜಿನಲ್ಲಿ 45 ಸೀಟುಗಳು ಹಾಗೂ ನಗರದ ರಾಜೀವ್ ಗಾಂಧಿ ದಂತ ವೈದ್ಯಕೀಯ ಕಾಲೇಜಿನಲ್ಲಿ 14 ಸೀಟುಗಳು ಸರ್ಕಾರಿ ಕೋಟಾದಡಿ ಹಂಚಿಕೆಗೆ ದೊರೆಯಲಿವೆ.ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಆಫ್ ಎಂಜಿನಿಯರಿಂಗ್ ಸಂಸ್ಥೆಗಳ ಮಾನ್ಯತೆ ನವೀಕರಿಸಲಾಗಿದೆ. ಈ ಸಂಸ್ಥೆಗಳಲ್ಲಿ ಕ್ರಮವಾಗಿ 585, 597 ಸೀಟು ಲಭ್ಯವಾಗಲಿವೆ. ಕೋರ್ಸ್‌ವಾರು ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.ಬೆಂಗಳೂರಿನ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು, ಕೊಪ್ಪಳದ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು, ಹಾವೇರಿಯ ಸಿಂಧಗಿ ಶಾಂತವೀರೇಶ್ವರ ಆಯುರ್ವೇದ ಕಾಲೇಜು, ಹಾಸನದ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಆಯುರ್ವೇದ ಅಂಡ್ ಹಾಸ್ಪಿಟಲ್, ಬೆಂಗಳೂರಿನ ಕಾಲಬೈರವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಶ್ರೀ ಶ್ರೀ ಕಾಲೇಜ್ ಆಫ್ ಆಯುರ್ವೇದ ಸೈನ್ಸ್ ಅಂಡ್ ರಿಸರ್ಚ್ ಸಂಸ್ಥೆಗಳ ಮಾನ್ಯತೆ ನವೀಕರಣಗೊಂಡಿದೆ.

ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಮೇಲಿನ ಸಂಸ್ಥೆಗಳಲ್ಲಿರುವ ಕೋರ್ಸ್‌ಗಳಲ್ಲಿನ ಸೀಟುಗಳನ್ನು ಆನ್‌ಲೈನ್ ಕೌನ್ಸೆಲಿಂಗ್ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry