ಬುಧವಾರ, ನವೆಂಬರ್ 20, 2019
20 °C

ಮಾನ್ವಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ:ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಒತ್ತಾಯ

Published:
Updated:

ರಾಯಚೂರು: ಮಾನ್ವಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಮನೆ ನಿರ್ಮಿಸಿ ಬಾಡಿಗೆ ನೀಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಹಾಗೂ ಅಕ್ರಮ ಕಟ್ಟಡ ತೆರವುಗೊಳಿಸಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿ ವಕೀಲ ಅವರು ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿ ಮೂಲ ಒಪ್ಪಂದದ ಉದ್ದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಪ್ರಭಾವಿ ರಾಜಕಾರಣಿ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ನಿವೇಶನವನ್ನು ನೀಡಲಾಗಿದೆ ಎಂದು ಆರೋಪಿಸಿದರು.ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ 1966ಅಧಿನಿಯಮ 27ರಪ್ರಕಾರ ರಚಿಸಿದ 2004ರ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ. ಅನಧಿಕೃತ ಮನೆ ನಿರ್ಮಿಸಿ ಮನೆಗಳನ್ನು ಬಾಡಿಗೆ ನೀಡಲಾಗಿದೆ. ಅಲ್ಲದೇ ಮೊಬೈಲ್ ಕಂಪೆನಿಗಳ ಟವರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಬಾಡಿಗೆ ರೂಪದಲ್ಲಿ ಬರುವ ಹಣವನ್ನು ವಂಚಿಸಲಾಗಿದೆ ಎಂದು ಆಪಾದಿಸಿದರು.ತೂಕ ಮಾಪನ(ವೇ ಬ್ರಿಡ್ಜ್) ನಿರ್ಮಾಣ ಉದ್ದೇಶಕ್ಕಾಗಿ ನೀಡಿದ ನಿವೇಶನದಲ್ಲಿ ವಿಜಯಲಕ್ಷ್ಮಿ ಆರ್ ಅಶೋಕಶೆಟ್ಟಿ ಅವರು ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆ ನೀಡಿದ್ದಾರೆ. ಸಾಯಿಬಾಬಾ ಟ್ರೇಡರ್ಸ್‌, ಸಾಯಿರಾಜ ಕ್ಯಾನ್ವಸಿಂಗ್ ಹಾಗೂ ಶಾಂಭವಿ ಕ್ಯಾನ್ವಸಿಂಗ್ ಹೆಸರಿನಲ್ಲಿ ಅಕ್ರಮವಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ.ಸಪ್ತಗಿರಿ ಸಂಕೀರ್ಣ, ಶ್ರೀಕೃಷ್ಣ ಟ್ರೇಡಿಂಗ್ ಕಂಪೆನಿ, ಲಿಮ್ರಾ ಟೇಡರ್ಸ್‌, ತಾಜ್ ಕನಸ್ಟ್ರಕ್ಷನ್ ಹಾಗೂ ಮಣಿಕಂಠ ಕ್ಯಾನ್ವಸಿಂಗ್‌ಗೆ ಕಟ್ಟಡಗಳನ್ನು ಬಾಡಿಗೆ ನೀಡಿ  ಸರ್ಕಾರಕ್ಕೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.ನಿವೇಶನ ಪಡೆದವರು: ಬಸನಗೌಡ ದದ್ದಲತಿಪ್ಪಣ್ಣ ದದ್ದಲ, ಸಿದ್ಧರಾಮ ಹಂಪಯ್ಯನಾಯಕ, ಕೆ.ಬಸವಂತಪ್ಪತಿರುಕಪ್ಪ, ಜೆ.ಶರಣಪ್ಪಗೌಡ ತಮ್ಮನಗೌಡ, ಕೆ.ಅಮರೇಶವೀರಣ್ಣ, ಸಂಗಮ್ಮ ಶರಣಪ್ಪ ಓಲೆಕಾರ ಎಂಬುವವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.ಈ ಎಲ್ಲ ಅವ್ಯವಹಾರಗಳು ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಪಡೆಯಲಾಗಿದೆ.

ನಿಯಮ ಉಲ್ಲಂಘನೆ ಮಾಡಿದ ನಿವೇಶನ ಹಂಚಿಕೆಯನ್ನು ರದ್ದುಪಡಿಸಬೇಕು, ಅಕ್ರಮವಾಗಿ ಕಟ್ಟಡ ನಿರ್ಮಿಸಿದವರಿಗೆ ಯಾವುದೇ ಪರಿಹಾರ ನೀಡಬಾರದು, ಠೇವಣಿಯನ್ನು ಮುಟ್ಟುಗೋಲ ಹಾಕಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಗಂಗಾಧರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಜಾನೇಕಲ್, ಮುಖಂಡರಾದ ಶಾಂತಪ್ಪ ಕಪಗಲ್, ಬಸವರಾಜ ನೀಲೋಗಲಕರ್, ಅಶೋಕ ಶೆಟ್ಟಿ, ಶೌಖತ್ ಅಲಿ ಪಟೇಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)