ಮಾನ್ಸೂನ್ ರಿಯಾಯಿತಿ ಕಾಲ

ಗುರುವಾರ , ಜೂಲೈ 18, 2019
28 °C

ಮಾನ್ಸೂನ್ ರಿಯಾಯಿತಿ ಕಾಲ

Published:
Updated:

ಮರ್ಸಿಡಿಸ್ ಬೆಂಜ್

ಭಾರತದಲ್ಲಿ ಮರ್ಸಿಡಿಸ್ ಬೆಂಜ್ ತಯಾರಾಗುತ್ತಿರುವ ಖುಷಿಯಲ್ಲಿ ಕಂಪೆನಿ ತನ್ನ ಇ-ಕ್ಲಾಸ್ ಮಾದರಿಯ ಮೇಲೆ ರಿಯಾಯಿತಿ ಘೋಷಿಸಿದೆ. ತನ್ನಲ್ಲಿರುವ ಹಳೆಯ ಕಾರುಗಳನ್ನು ಬಿಕರಿ ಮಾಡುವ ಉದ್ದೇಶದಿಂದ ಈಗಿರುವ ಮೈನ್‌ಸ್ಟೇ ಸಲೂನ್ ಕಾರುಗಳ ಮೇಲೆ ಏಳು ಲಕ್ಷ ರೂಪಾಯಿ ಉಳಿಸಬಹುದಾದ ಅವಕಾಶವನ್ನು ಅದು ನೀಡುತ್ತಿದೆ. ಇದರಲ್ಲಿ ವಿ6 ಮಾದರಿಯ ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಯ ಕಾರುಗಳು ಲಭ್ಯ.

ಫೋಕ್ಸ್‌ವ್ಯಾಗನ್

ಪೊಲೊ ಸಣ್ಣಕಾರಿನ ಟ್ರೆಂಡ್‌ಲೈನ್ ಹಾಗೂ ಹೈಲೈನ್ ಮಾದರಿಯ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಖರೀದಿಯ ಮೇಲೆ 19ರಿಂದ 24 ಸಾವಿರ ರೂಪಾಯಿಗಳ ಉಚಿತ ವಿಮೆ, ಪೆಟ್ರೋಲ್ ಮಾದರಿಯ ಮೇಲೆ ಹೆಚ್ಚುವರಿ ಹತ್ತು ಸಾವಿರ ರೂಪಾಯಿಗಳ ನಗದು ಹಾಗೂ ಹಳೆ ಕಾರು ನೀಡಿ ಹೊಸತನ್ನು ಖರೀದಿಸಿದರೆ ಹತ್ತು ಸಾವಿರ ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಸಿಗಲಿದೆ. ಡೀಸೆಲ್ ಮಾದರಿಯ ಕಾರುಗಳ ಖರೀದಿಗೆ ಹತ್ತು ಸಾವಿರ ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್, ಟ್ರಂಡ್‌ಲೈನ್ ಕಾರುಗಳ ಮೇಲೆ 15 ಸಾವಿರ ರೂಪಾಯಿಗಳ ನಗದು ಡಿಸ್ಕೌಂಟ್ ಹಾಗು ಕಂಫರ್ಟ್‌ಲೈನ್ ಮೇಲೆ ರೂ. 7.5 ಸಾವಿರಗಳ ನಗದು ರಿಯಾಯಿತಿ ದೊರೆಯಲಿದೆ.2012ರ ಮಾದರಿಯ ಪಸ್ಸಾಟ್ ಟ್ರೆಂಡ್‌ಲೈನ್ ಕಾರುಗಳು ಮೇಲೆ 2.5ಲಕ್ಷ ರೂಪಾಯಿ ರಿಯಾಯಿತಿಯನ್ನು ಫೋಕ್ಸ್‌ವ್ಯಾಗನ್ ಘೋಷಿಸಿದ್ದು, ಹೈಲೈನ್ ಮಾದರಿಯ ಕಾರುಗಳ ಮೇಲೆ 2ಲಕ್ಷ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಇದರೊಂದಿಗೆ 40 ಸಾವಿರ ರೂಪಾಯಿಯ ಉಚಿತ ವಿಮೆ ಕೂಡಾ ನೀಡಲಾಗುತ್ತಿದೆ. ಜತೆಗೆ ಖರೀದಿಸುವ ಕಾರಿನ ಮಾದರಿ ಹಾಗೂ ಪೆಟ್ರೋಲ್ ಆಟೊಮ್ಯಾಟಿಕ್ ಕಾರು ಹಾಗೂ ಡೀಸೆಲ್ ಹೈಲೈನ್ ಮಾದರಿಯ ಕಾರಿಗೆ ಎಕ್ಸ್‌ಚೇಂಜ್ ಬೋನಸ್ ಮೇಲೆ 20 ಸಾವಿರ ರೂಪಾಯಿಗಳ ರಿಯಾಯಿತಿ ನೀಡಲಾಗುತ್ತಿದೆ.

ಷವರ್ಲೆ

ಷವರ್ಲೆ ಕಂಪೆನಿಯ ಬೀಟ್ ಕಾರಿನ ಎಲ್ಲಾ ಮಾದರಿಯ ಮೇಲೆ ಉಚಿತ ವಿಮೆ ನೀಡಲಾಗುತ್ತಿದ್ದು, ಒಟ್ಟು 15 ಸಾವಿರ ರೂಪಾಯಿ ಉಳಿಸಬಹುದಾಗಿದೆ. ಇದರಲ್ಲಿ ಈಗಾಗಲೇ ಷವರ್ಲೆ ಕಾರು ಹೊಂದಿರುವ ಹಾಗೂ ಹೊಸತಾಗಿ ಮತ್ತೊಂದು ಷವರ್ಲೆ ಕಾರು ಖರೀದಿಸುವವರಿಗಾಗಿ ಹತ್ತು ಸಾವಿರ ರೂಪಾಯಿಯ ಬದ್ಧತೆಯ ಬೋನಸ್ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಷವರ್ಲೆ ಖರೀದಿಸುವವರಿಗೆ ತಮ್ಮ ಹಳೆಯ ಕಾರನ್ನು ನೀಡಿದಲ್ಲಿ 15 ಸಾವಿರ ರೂಪಾಯಿಗಳ ನಗದು ರಿಯಾಯಿತಿ ನೀಡಲಾಗುತ್ತಿದೆ.ಡೀಲರ್‌ಗಳು ಹೇಳುವಂತೆ ಷವರ್ಲೆ ಕ್ರೂಜ್ ಕಾರಿನ ಮೇಲೆ 60 ಸಾವಿರ ರೂಪಾಯಿಗಳ ರಿಯಾಯಿತಿ ನೀಡಲಾಗುತ್ತದೆ. ಇದರೊಂದಿಗೆ ಕಾರ್ಪೊರೇಟ್ ಕಂಪೆನಿಯಲ್ಲಿ ಕೆಲಸ ಮಾಡುವವರಿಗೆ ಹತ್ತು ಸಾವಿರ ರೂಪಾಯಿಗಳ ರಿಯಾಯಿತಿ ಹಾಗೂ ಎಕ್ಸ್‌ಚೇಂಜ್ ಬೋನಸ್ 15 ಸಾವಿರ ರೂಪಾಯಿ ಸಿಗಲಿದೆ.ಮಿಟ್ಸುಬಿಷಿ

ಪಜೆರೊ ಸ್ಪೋಟ್ಸ್ ಮಾದರಿ ಕಾರಿನ ಮೇಲೆ ಉಚಿತ ವಿಮೆಯ ರಿಯಾಯಿತಿಯನ್ನು ಮಿಟ್ಸುಬಿಷಿ ನೀಡುತ್ತಿದೆ. ಅಂದರೆ ಎಸ್‌ಯುವಿ ಖರಿದಿಯ ಮೇಲೆ 63 ಸಾವಿರ ರೂಪಾಯಿಗಳನ್ನು ಉಳಿಸಬಹುದಾಗಿದೆ.

ಟೊಯೊಟಾ

ಇನ್ನೋವಾ ಕಾರು ಖರೀದಿಸುವವರಿಗೆ 20 ಸಾವಿರ ರೂಪಾಯಿಗಳ ನಗದು ಹಾಗೂ ಮೂರು ಸಾವಿರ ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿ ದೊರಕಲಿದೆ. ಜತೆಗೆ ಬದ್ಧತೆಯ ಬೋನಸ್ ಆಗಿ ಹತ್ತು ಸಾವಿರ ರೂಪಾಯಿ ನಗದು ರಿಯಾಯಿತಿ ಲಭ್ಯ.

ಸ್ಕೊಡಾ

ಸ್ಕೊಡಾ ತನ್ನ ಎಟಿ ಮಾದರಿಯ ಎಸ್‌ಯುವಿ ಕಾರಿನ ಮೇಲೆ 71 ಸಾವಿರ ರೂಪಾಯಿಯ ನಗದು ರಿಯಾಯಿತಿ ಹಾಗೂ 17,500 ರೂಪಾಯಿಯ ಕಾರ್ಪೊರೇಟ್ ರಿಯಾಯಿತಿ ನೀಡುವುದಾಗಿ ಘೋಷಿಸಿದೆ.ಬಿಎಂಡಬ್ಲೂ

ಬಿಎಂಡಬ್ಲೂ ಕಂಪೆನಿಯ ಮೂರು ಮಾದರಿಯ ಕಾರುಗಳ ಮೇಲೆ ರಿಯಾಯಿತಿ ನೀಡುವ ಸುದ್ದಿ ವರದಿಯಾಗಿದೆ. ಕೆಲವು ಮಾದರಿಯ ಬಿಎಂಡಬ್ಲೂ ಕಾರುಗಳ ಮೇಲೆ 2ರಿಂದ ನಾಲ್ಕು ಲಕ್ಷ ರೂಪಾಯಿಗಳ ರಿಯಾಯಿತಿ ಹಾಗೂ 5 ಸಿರೀಸ್ ಕಾರಿನ ಮೇಲೆ 3ರಿಂದ 5 ಲಕ್ಷ ರೂಪಾಯಿ ರಿಯಾಯಿತಿ ನೀಡುತ್ತಿದೆ.

ಹೋಂಡಾ ಪವರ್ ವಿಂಡೊ ಬದಲು

ಹೋಂಡಾ ಕಂಪೆನಿ ತನ್ನ ಎರಡನೇ ತಲೆಮಾರಿನ ಸಿಟಿ ಮಾದರಿಯ ಕಾರುಗಳ ಪವರ್ ವಿಂಡೊ ಸ್ವಿಚ್‌ಗಳನ್ನು ಬದಲಿಸಲು ಮುಂದಾಗಿದೆ. 2007 ಹಾಗೂ 2008ರಲ್ಲಿ ಒಟ್ಟು 42,672 ಕಾರುಗಳು ತಯಾರಾಗಿದ್ದವು. ಆದರೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಮಾರಾಟವಾದ ಸಿಟಿ ಮಾದರಿಯ ಕಾರುಗಳಲ್ಲಿ ಕಿಟಕಿಯ ಗಾಜು ಹಾಕಿದ್ದರೂ ಚಾಲಕನ ಬದಿಯಿಂದ ನೀರು ಒಳ ಬರುವ ದೂರುಗಳು ದಾಖಲಾಗಿದ್ದವು. ಆದರೆ ಈ ಬಗೆಯ ದೂರುಗಳು ಭಾರತದಿಂದ ವರದಿಯಾಗಿಲ್ಲವಂತೆ.ಆದರೂ ಹೊಂಡಾ ಕಾರ್ಸ್‌ ಇಂಡಿಯಾ ಲಿಮಿಟೆಡ್ ಸ್ವಯಂ ಪ್ರೇರಿತವಾಗಿ ಪವರ್ ವಿಂಡೊ ಸ್ಚಿಚ್‌ಗಳನ್ನು ಬದಲಿಸಲು ತೀರ್ಮಾನಿಸಿದೆ. ಮೇಲೆ ಹೇಳಲಾದ ದೂರುಗಳು ಯಾವುದಾದರೂ ಕಾರುಗಳಲ್ಲಿ ಕಂಡುಬಂದಲ್ಲಿ ಅವರು ಹೋಂಡಾ ಡೀಲರ್‌ಗಳ ಬಳಿ ತಮ್ಮ ಕಾರನ್ನು ತೆಗೆದುಕೊಂಡು ಹೋಗಿ ಉಚಿತವಾಗಿ ಸ್ವಿಚ್ ಬದಲಿಸಿಕೊಳ್ಳಬಹುದಾಗಿದೆ. ಆದರೆ 3ನೇ ತಲೆಮಾರಿನ ಯಾವ ಕಾರುಗಳು ಈ ಬದಲಾವಣೆಗೆ ಒಳಪಡುವುದಿಲ್ಲ ಎಂದು ವರದಿಯಾಗಿದೆ.

ಭಾರತದಲ್ಲಿ ತಯಾರಾಗುತ್ತಿದೆ ಮರ್ಕ್

ಮರ್ಸಿಡಿಸ್ ಬೆಂಜ್ ಈಗ ಭಾರತದಲ್ಲೇ ಅಭಿವೃದ್ಧಿಗೊಳ್ಳುತ್ತಿದೆ. ಇದರ ಮೊದಲ ಕಂತು ಇ-ಕ್ಲಾಸ್ ಮಾದರಿ ಕಾರು ಮಹಾರಾಷ್ಟ್ರ ಚಕನ್ ತಯಾರಿಕಾ ಘಟಕದಿಂದ ಮಳಿಗೆಗೆ ರವಾನೆಗೊಂಡಿದೆ. ಮೂರು ಮಾದರಿಗಳಲ್ಲಿ ಲಭ್ಯವಿರುವ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್‌ನ ಇ200 ಸಿಜಿಐ ಪೆಟ್ರೋಲ್ ಹಾಗೂ ಇ250 ಸಿಡಿಐ ಡೀಸಲ್ ಹಾಗೂ ವಿಶೇಷ ಆವೃತ್ತಿಯ ಇ250 ಸಿಡಿಐ ಬೆಲೆ ಕ್ರಮವಾಗಿ 40.73ಲಕ್ಷ, 43.65ಲಕ್ಷ ಹಾಗೂ 48.98 ಲಕ್ಷ (ದೆಹಲಿಯಲ್ಲಿ ತೆರಿಗೆ ಹಾಗೂ ವಿಮೆ ಹೊರತುಪಡಿಸಿದ ಬೆಲೆ) ನಿಗದಿಪಡಿಸಲಾಗಿದೆ.ಭಾರತದಲ್ಲೇ ತಯಾರಾಗುತ್ತಿರುವುದರಿಂದ ಬೆಲೆಯಲ್ಲೂ ಸಾಕಷ್ಟು ಇಳಿಮುಖವಾಗಿದೆ. ಇ200 ಸಿಜಿಐ ಕಾರಿನಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಿದ್ದು ಇದು ಡೈರೆಕ್ಟ್ ಇಂಜೆಕ್ಷನ್ ತಂತ್ರಜ್ಞಾನ ಅಳವಡಿಸಿದ್ದು 184 ಪಿಎಸ್ ಹಾಗು 300 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ 0ಯಿಂದ 100 ಕಿ.ಮೀ. ವೇಗ ಕ್ರಮಿಸಲು 7.9 ಸೆಕೆಂಡುಗಳು ತೆಗೆದುಕೊಳ್ಳಲಿದೆ.ಅದರಂತೆಯೇ ಡೀಸೆಲ್ ಮಾದರಿಯ ಮರ್ಸಿಡಿಸ್ ಬೆಂಜ್ ಇ 250 ಸಿಡಿಐನಲ್ಲಿ 2.2 ಲೀಟರ್ ಎಂಜಿನ್ ಅಳವಡಿಸಲಾಗಿದ್ದು, 204ಪಿಎಸ್ ಶಕ್ತಿ ಹಾಗೂ 500ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕಾರು 0-100 ಕಿ.ಮೀ. ವೇಗ ಕ್ರಮಿಸಲು 7.5 ಸೆಕೆಂಡುಗಳನ್ನು ತೆಗೆದುಕೊಳ್ಳಲಿದೆ. ಇದರೊಂದಿಗೆ ಗರಿಷ್ಠ ವೇಗ ಪ್ರತಿ ಗಂಟೆಗೆ 242 ಕಿ.ಮೀ. ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry