ಶನಿವಾರ, ಫೆಬ್ರವರಿ 22, 2020
19 °C
ಇ–ಮಾಪನ ಯೋಜನೆಗೆ ಸಚಿವರಿಂದ ಚಾಲನೆ

ಮಾಪನ ಇಲಾಖೆ ಕಾಗದ ರಹಿತ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾನೂನು ಮಾಪನ ಇಲಾಖೆ ಚಟುವಟಿಕೆಗಳನ್ನು ಗಣಕೀಕೃತ ಗೊಳಿಸುವ ‘ಇ–ಮಾಪನ’ ಯೋಜನೆಗೆ ಬುಧವಾರ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ ನೀಡಿದರು.

‘ಈವರೆಗೆ ತೂಕ ಮತ್ತು ಅಳತೆ ಮಾಪನ ಕ್ರಿಯೆ ಕೈಬರಹದಲ್ಲಿ ನಡೆಯು ತ್ತಿತ್ತು. ಇದರಿಂದ ಮಾಪನದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದವು. ‘ಇ–ಮಾಪನ’ ಯೋಜನೆಯಿಂದ ನಿಖರ ಮಾಪನ ಸಾಧ್ಯ. ಆಡಳಿತವೂ ಪಾರದರ್ಶಕವಾಗಿ ಗ್ರಾಹಕ ಸ್ನೇಹಿಯಾಗಲಿದೆ’ ಎಂದರು.

‘ಇಲಾಖೆಯನ್ನು ಕಾಗದ ರಹಿತವಾ ಗಿಸುವ ಗುರಿ ಇದ್ದು, ಇಲಾಖೆಯ ಎಲ್ಲ ಕಚೇರಿಗೆ ಹಾಗೂ ಅಧಿಕಾರಿಗಳಿಗೆ ಲ್ಯಾಪ್‌ ಟಾಪ್‌, ಮೊಬೈಲ್‌ ಪ್ರಿಂಟರ್‌, ಇಂಟ ರ್ನೆಟ್‌ ಡಾಟಾ ಕಾರ್ಡ್‌, ಡಿಜಿಟಲ್‌ ಸಿಗ್ನೇ ಚರ್‌ ಕಾರ್ಡ್‌ ನೀಡಲಾಗಿದೆ’ ಎಂದರು.
ಸಾರಿಗೆ ಇಲಾಖೆ ಸಮನ್ವಯ: ‘ಆಟೊ ರಿಕ್ಷಾಗಳಿಗೆ ಮೀಟರ್‌ ಅಳವಡಿಸುವಾಗ ಮೊದಲು ನಮ್ಮ ಇಲಾಖೆ ಪ್ರಮಾಣಪತ್ರ ಕೊಡಬೇಕು. ನಂತರ ಸಾರಿಗೆ ಇಲಾಖೆ ಅರ್ಹತಾ ಪತ್ರ ಕೊಡುತ್ತದೆ. ಇನ್ನು ಮುಂದೆ ಸಾರಿಗೆ ಇಲಾಖೆ ಜತೆ ಸಮನ್ವಯ ಸಾಧಿಸಿ ಅವರಲ್ಲಿನ ದತ್ತಾಂಶಗಳನ್ನು ಬಳಸಲಾಗುವುದು’ ಎಂದರು.

ಚಿನ್ನ ಪರಿಶುದ್ಧತೆ
ಆಭರಣದ ಅಂಗಡಿಗಳು ಬಿಲ್‌ಗಳಲ್ಲಿ ಚಿನ್ನದ ತೂಕ, ಪರಿಶುದ್ಧತೆ(ಕ್ಯಾರೆಟ್‌) ನಮೂದಿ ಸುವುದು ಇನ್ನು ಮುಂದೆ ಕಡ್ಡಾಯ ವಾಗಲಿದೆ. ‘ಕರ್ನಾಟಕ ಕಾನೂನು ಮಾಪನ ಜಾರಿ ನಿಯಮ–2011’ ತಿದ್ದುಪಡಿ ತರುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)