ಮಾಯಕಾರ ಮಾರಿಯೋ

7

ಮಾಯಕಾರ ಮಾರಿಯೋ

Published:
Updated:
ಮಾಯಕಾರ ಮಾರಿಯೋ

ಮಾರಿಯೋ ಮಿರಾಂಡಾ ಹುಟ್ಟಿದ್ದು ಎಲ್ಲಿ, ಯಾವಾಗ?

1926ರಲ್ಲಿ ದಮನ್‌ನಲ್ಲಿ. ಅವರ ಚಿತ್ರಗಳ ಆಶಯವೇನು?

ಗೋವಾ ಸಂಸ್ಕೃತಿಯನ್ನು ಬಿಂಬಿಸುವ ಕಲಾತ್ಮಕ ಕೆಲಸವನ್ನು ಮಿರಾಂಡಾ ಮಾಡಿದ್ದಾರೆ. ಕಾರ್ಟೂನಿಸ್ಟ್ ಆಗಿ ಜನಪ್ರಿಯರಾದರೂ ಇಲ್ಲಸ್ಟ್ರೇಷನ್‌ನಲ್ಲೂ ಅವರದ್ದು ಎತ್ತಿದಕೈ. ತಾವು ಸುತ್ತಾಡಿದ ವಿವಿಧ ನಗರಗಳನ್ನು ಅವರು ತಮ್ಮ ಗೆರೆಗಳಲ್ಲಿ ಹಿಡಿದಿಟ್ಟಿದ್ದಾರೆ. ದೇಶದ ವಿವಿಧ ಭಿತ್ತಿಗಳಲ್ಲಿ ಮಿರಾಂಡಾ ಕಲ್ಪನೆಯ `ಮ್ಯೂರಲ್~ಗಳಿವೆ. ದಕ್ಷಿಣ ಮುಂಬೈನ ಕೆಫೆ ಮಾಂಡೆಗರ್‌ನಲ್ಲಿ ಅವರ ಮಹತ್ವದ ಕಾರ್ಟೂನ್‌ಗಳು ನೋಡಲು ಲಭ್ಯ.ಅವರು ಯಾವ ಪತ್ರಿಕೆಗೆ ಕೆಲಸ ಮಾಡಿದರು?

1960ರಲ್ಲಿ `ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ~ದಲ್ಲಿ ಕಾರ್ಟೂನ್ ಬಿಡಿಸುವ ಮೂಲಕ ಮಾರಿಯೋ ಮಿರಾಂಡಾ ಹೆಸರಾದದ್ದು. ಒಂದು ವರ್ಷದ ನಂತರ `ದಿ ಟೈಮ್ಸ ಆಫ್ ಇಂಡಿಯಾ~ಗೆ ಅವರು ಕೆಲಸಕ್ಕೆ ಸೇರಿದರು. ಅಲ್ಲಿ `ಸಂಡೇ ಟೈಮ್ಸ~, `ಫೆಮಿನಾ~, `ಎಕನಾಮಿಕ್ ಟೈಮ್ಸ~ ಮೊದಲಾದ ಪುರವಣಿಗಳಲ್ಲಿ ಅವರ ಕಾರ್ಟೂನ್‌ಗಳು ಪ್ರಕಟವಾದವು. `ಲಿಲಿಪುಟ್~, `ಮ್ಯಾಡ್~ ಹಾಗೂ `ಪಂಚ್~ ಅಂತರರಾಷ್ಟ್ರೀಯ ನಿಯತಕಾಲಿಕೆಗಳೂ ಮಿರಾಂಡಾ ಕಾರ್ಟೂನ್‌ಗಳನ್ನು ಪ್ರಕಟಿಸಿವೆ.ಅವರು ಯಾವುದಾದರೂ ಪುಸ್ತಕ ಬರೆದಿದ್ದಾರಾ?

ಹೌದು. `ಲಾಫ್ ಇಟ್ ಆಫ್~, `ಗೋವಾ ವಿತ್ ಲವ್~, `ಮಾರಿಯೋಸ್ ಟ್ರಾವೆಲ್ಸ್~ ಹಾಗೂ `ಜರ್ಮನಿ ಇನ್ ವಿಂಟರ್‌ಟೈಮ್~ ಅವರು ಬರೆದಿರುವ ಮುಖ್ಯವಾದ ಕೃತಿಗಳು. ಡಾಮ್ ಮೊರೇಸ್, ಮನೋಹರ್ ಮಲಗಾಂವ್ಕರ್ ಹಾಗೂ ಮೇರಿಯೋ ಕ್ಯಾಬ್ರೆಲ್ ಎ ಸಾ ಬರೆದ ಪುಸ್ತಕಗಳಿಗೆ ಇಲ್ಲಸ್ಟ್ರೇಷನ್‌ಗಳನ್ನೂ ಮಾಡಿದ್ದಾರೆ.ಭಾರತ ಸರ್ಕಾರ ಅವರನ್ನು ಹೇಗೆ ಗೌರವಿಸಿದೆ?

ಮಿರಾಂಡಾ ಅವರಿಗೆ 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಸರ್ಕಾರ ನೀಡಿ ಗೌರವಿಸಿದೆ. ಬೆಂಗಳೂರಿನ ಅಖಿಲ ಭಾರತ ಕಾರ್ಟೂನಿಸ್ಟ್‌ಗಳ ಸಂಘವು ಅವರಿಗೆ ಜೀವಮಾನದ ಸಾಧನೆಗಾಗಿ ಸನ್ಮಾನ ಮಾಡಿ ಗೌರವಿಸಿದೆ.

 

ಅವರು ವಾಸವಿದ್ದ ಮನೆಯ ವಿಶೇಷತೆ ಏನು?

ಗೋವಾದ ಸ್ಯಾಲ್‌ಸೆಟ್ ಎಂಬ ಹಳ್ಳಿಯಲ್ಲಿನ 17ನೇ ಶತಮಾನದಷ್ಟು ಹಳೆಯ ಮನೆಯಲ್ಲಿ ಅವರು ವಾಸವಿದ್ದದ್ದು. ಮಿರಾಂಡಾ ಅವರ ಪೂರ್ವಜರ ಮನೆ ಅದು. ಶ್ಯಾಮ್ ಬೆನೆಗಲ್ ಅವರ `ತ್ರಿಕಾಲ್~ ಚಿತ್ರದಲ್ಲಿ ಆ ಮನೆಯನ್ನು ಚಿತ್ರೀಕರಿಸಲಾಗಿದೆ. ಮಿರಾಂಡಾ ನಮ್ಮನ್ನು ಡಿಸೆಂಬರ್ 11, 2011ರಂದು ಅಗಲಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry