ಬುಧವಾರ, ಅಕ್ಟೋಬರ್ 16, 2019
27 °C

ಮಾಯಾವತಿ, ಆನೆ ಪ್ರತಿಮೆಗೆ ಹೊದಿಕೆ

Published:
Updated:

ಲಖನೌ (ಪಿಟಿಐ): ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಅಳವಡಿಸಿರುವ, ಮುಖ್ಯಮಂತ್ರಿ ಮಾಯಾವತಿ ಮತ್ತು ಅವರ ಪಕ್ಷದ ಚಿಹ್ನೆಯಾದ `ಆನೆ~ ಗುರುತಿನ ಪ್ರತಿಮೆಗಳಿಗೆ ವಿಧಾನಸಭಾ ಚುನಾವಣೆ ಪೂರ್ಣಗೊಳ್ಳುವವರೆಗೂ ಹೊದಿಕೆ ಹೊದಿಸುವಂತೆ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಶನಿವಾರ ಆದೇಶಿಸಿದ್ದಾರೆ.ಈ ವಿಷಯ ಚುನಾವಣಾ ನೀತಿ ಸಂಹಿತೆಗೆ ಸಂಬಂಧಪಟ್ಟಿರುವ ಕಾರಣ, ಆದಷ್ಟು ಶೀಘ್ರದಲ್ಲಿ ಈ ಕಾರ್ಯ ನಡೆಯಬೇಕು ಎಂದು ಅವರು ಹೇಳಿದ್ದಾರೆ.`ಚುನಾವಣೆ ಸಂದರ್ಭದಲ್ಲಿ ಯಾರೊಬ್ಬರೂ ರಾಜಕೀಯ ಲಾಭ ಪಡೆಯಲು ಅವಕಾಶ ನೀಡು ವುದಿಲ್ಲ. ಕೆಲವು ಕಚೇರಿಗಳಲ್ಲಿ ಹಾಕಿ ರುವ ಮುಖಂಡರ ಭಾವಚಿತ್ರಗಳನ್ನು ಸಹ ತೆಗೆಯಲಾಗುತ್ತದೆ~ ಎಂದು ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿರುವ ಆಯುಕ್ತರು ಸುದ್ದಿಗಾರರಿಗೆ ತಿಳಿಸಿದರು.ಇತ್ತೀಚಿಗೆ ಸಭೆಯಲ್ಲಿ, ಮಾಯಾವತಿ ಮತ್ತು ಆನೆಯ ಪ್ರತಿಮೆ ಬಗ್ಗೆ ರಾಜಕೀಯ ಪಕ್ಷಗಳು ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

Post Comments (+)