ಮಂಗಳವಾರ, ಮೇ 24, 2022
26 °C

ಮಾಯಾ ಕಾಮತ್‌ವ್ಯಂಗ್ಯಚಿತ್ರ ಪ್ರಶಸ್ತಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಅತ್ಯುತ್ತಮ ರಾಜಕೀಯ ವ್ಯಂಗ್ಯಚಿತ್ರಗಳಿಗಾಗಿ ನೀಡುವ 2010ರ ಮಾಯಾ ಕಾಮತ್ ಸ್ಮಾರಕ ಪ್ರಶಸ್ತಿಗೆ ಪ್ರವೇಶ ಪತ್ರ ಆಹ್ವಾನಿಸಿದೆ. ಈ ವಾರ್ಷಿಕ ಪ್ರಶಸ್ತಿಗಳನ್ನು ದಿ. ಮಾಯಾ ಕಾಮತ್ ಅವರ ಕುಟುಂಬ ಸ್ಥಾಪಿಸಿದೆ.ಅತ್ಯುತ್ತಮ ರಾಜಕೀಯ ವ್ಯಂಗ್ಯಚಿತ್ರಗಳ ವಿಭಾಗದಲ್ಲಿ ಮೊದಲ ಮೂರು ವಿಜೇತರಿಗೆ ಕ್ರಮವಾಗಿ 25 ಸಾವಿರ, 15 ಸಾವಿರ ಮತ್ತು 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಸ್ಪರ್ಧೆಯು ಎಲ್ಲ ಇಂಗ್ಲಿಷ್ ಮತ್ತು ಭಾರತೀಯ ಭಾಷೆಯ ವ್ಯಂಗ್ಯಚಿತ್ರಕಾರರಿಗೂ ಮುಕ್ತ.ಸ್ಪರ್ಧಿಗಳು 2010 ಜನವರಿ 1 ರಿಂದ ಡಿಸೆಂಬರ್ 31ರ ಮಧ್ಯದಲ್ಲಿ ಪ್ರಕಟವಾದ ಗರಿಷ್ಠ 3 ರಾಜಕೀಯ ವ್ಯಂಗ್ಯಚಿತ್ರಗಳನ್ನು ಕಳಿಸಬಹುದು.ಇದಲ್ಲದೆ 25 ವರ್ಷ ಮೀರದ ಅತ್ಯುತ್ತಮ ಯುವ ವ್ಯಂಗ್ಯಚಿತ್ರಕಾರರಿಗೆ 10 ಸಾವಿರ ರೂಪಾಯಿ ಮೊತ್ತದ ಬಹುಮಾನ ನೀಡಲಾಗುತ್ತದೆ.ಆಸಕ್ತರು ತಮ್ಮ ಪ್ರಕಟಿತ ಅಥವಾ ಅಪ್ರಕಟಿತ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್‌ಗಳನ್ನು (ಗರಿಷ್ಠ 6) ಕಳಿಸಬಹುದು.ಸಾಹಿತಿ ಗಿರೀಶ್ ಕಾರ್ನಾಡ್, ಕಲಾವಿದ ಎಸ್.ಜಿ. ವಾಸುದೇವ ಮತ್ತು ಕೇಶವ ಅವರನ್ನು ಒಳಗೊಂಡ ಸಮಿತಿ ವ್ಯಂಗ್ಯಚಿತ್ರಗಳನ್ನು ಆಯ್ಕೆ ಮಾಡಿ ಫಲಿತಾಂಶವನ್ನು ಏಪ್ರಿಲ್‌ನಲ್ಲಿ ಘೋಷಿಸಲಿದೆ. ಮೇ ತಿಂಗಳಲ್ಲಿ ಬೆಂಗಳೂರಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ವ್ಯಂಗ್ಯಚಿತ್ರಗಳನ್ನು ಕಳಿಸಲು ಮಾರ್ಚ್ 31 ಕೊನೆಯ ದಿನ. ಮಾಹಿತಿಗೆ: www.cartoonistsindia.com ಅಥವಾ info@cartoonistsindia.com.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.