ಶನಿವಾರ, ಮಾರ್ಚ್ 6, 2021
19 °C

ಮಾರಮ್ಮದೇವಿಯ ಜಾತ್ರಾಮಹೋತ್ಸವ

ಚಿಕ್ಕರಾಮು Updated:

ಅಕ್ಷರ ಗಾತ್ರ : | |

ಮಾರಮ್ಮದೇವಿಯ ಜಾತ್ರಾಮಹೋತ್ಸವ

ಪುರಾಣ ಪ್ರಸಿದ್ದ ಶ್ರೀಮಾರಮ್ಮದೇವಿಯ ಜಾತ್ರಾಮಹೋತ್ಸವ, ಊರಹಬ್ಬ ಸೋಮವಾರ ಮತ್ತು ಮಂಗಳವಾರ (ಮಾ.24, 25) ತಾವರೆಕೆರೆಯಲ್ಲಿ ನಡೆಯಲಿದೆ.ಗುಲಗುಂಜನಹಳ್ಳಿ, ತಾವರೆಕೆರೆ, ದೇವಮಾಚೋಹಳ್ಳಿ, ಪೆದ್ದನಪಾಳ್ಯದ ಜನರು ಏಕಕಾಲದಲ್ಲಿ ಊರಹಬ್ಬವನ್ನು ಆಚರಿಸುತ್ತಾರೆ. ತಾವರೆಕೆರೆ ಪ್ರಮುಖ ಕೇಂದ್ರಸ್ಥಾನವಾಗಿದ್ದು, ಗ್ರಾಮದ ಹಿರಿಯರು, ಪಣಮೊದಲಿಗರು ಸೇರಿ ದೇವಾಲಯದ ಮುಂಭಾಗದಲ್ಲಿ ಕಂಬ ನೆಟ್ಟು ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡುತ್ತಾರೆ.ಸೋಮವಾರ ಮಾರಮ್ಮದೇವಿಗೆ ಮಹಿಳೆಯರು ವಿವಿಧ ರೀತಿಯ ತಂಬಿಟ್ಟಿನ ಆರತಿಯೊಂದಿಗೆ ಮೆರವಣಿಗೆಯಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ. ನಂತರ ಮೆರವಣಿಗೆಯಲ್ಲಿ ಸಾಗಿ ಹೊಳೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದಮೇಲೆ ಮಾರಮ್ಮ ದೇವಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂಜಾಕುಣಿತ, ಪಟ್ಟದಕುಣಿತ, ವಿವಿಧ ಜನಪದ ಕಲಾಪ್ರದರ್ಶನ, ಸಿಡಿಮದ್ದು, ಬಾಣಬಿರುಸುಗಳೊಂದಿಗೆ ನಡೆಯುತ್ತದೆ.ಮಂಗಳವಾರ ಬೆಳಿಗ್ಗೆ ಮಾರಮ್ಮದೇವಿ, ಶ್ರೀರಾಮದೇವರು, ಯಲಚಗುಪ್ಪೆ ಮಾರಮ್ಮ ದೇವಿ, ದೇವಮಾಚೋಹಳ್ಳಿ ಮತ್ತು ಪೆದ್ದನಪಾಳ್ಯ ಮಾರಮ್ಮದೇವರುಗಳ ಅಗ್ನಿಕೊಂಡ ಮತ್ತು ಜಾತ್ರಾಮಹೋತ್ಸವ ಏಕಕಾಲದಲ್ಲಿ ನಡೆಯುತ್ತವೆ. ಸಂಜೆ ವಿವಿಧ ಬಗೆಯ ಆರತಿ, ಪಲ್ಲಕ್ಕಿ ಉತ್ಸವ, ಸಿಡಿ ಕಾರ್ಯಕ್ರಮ ಇರುತ್ತದೆ.ನಾಳೆ ಬಸವೇಶ್ವರ ಜಾತ್ರೆ

ಕೆಂಗೇರಿ ಹೋಬಳಿಯ ಕೆ.ಗೊಲ್ಲಹಳ್ಳಿಯಲ್ಲಿ ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀಬಸವೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವ, ಜನಪದ ಕಲಾ ಉತ್ಸವ, ಪಲ್ಲಕ್ಕಿ ಉತ್ಸವ, ಅನ್ನದಾನ ಕಾರ್ಯಕ್ರಮ ಸೋಮವಾರ (ಮಾ.24) ನಡೆಯಲಿದೆ. ಹರಿಜನ ಕುಟುಂಬದವರು ದೇವಾಲಯದ ಅರ್ಚಕರಾಗಿ ಪೂಜೆ ಸಲ್ಲಿಸಿಕೊಂಡು ಬರುತ್ತಿರುವುದು ವಿಶೇಷ. ಶತಮಾನಗಳ ಇತಿಹಾಸವಿರುವ ಬಸವೇಶ್ವರ ಸ್ವಾಮಿಯ ಉತ್ಸವವನ್ನು ಎಲ್ಲ ಜನಾಂಗದವರ ಒಗ್ಗಟ್ಟಿನಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.