ಬುಧವಾರ, ನವೆಂಬರ್ 20, 2019
21 °C

ಮಾರಮ್ಮ ಜಾತ್ರಾ ಮಹೋತ್ಸವ

Published:
Updated:

ಕೊಳ್ಳೇಗಾಲ: ಹನೂರು ಪಟ್ಟಣದಲ್ಲಿ ಏಪ್ರಿಲ್ 1ರಿಂದ ಬೆಟ್ಟಳ್ಳಿ ಮಾರಮ್ಮನ ಬೃಹತ್ ಜಾತ್ರಾ ಮಹೋತ್ಸವ ಆರಂಭವಾಗಿದೆ. ಜಾತ್ರೆ ಅಂಗವಾಗಿ 15 ದಿನಗಳಿಂದ ಪಟ್ಟಣದ ದೇವಾಲಯದಲ್ಲಿ ನಿತ್ಯ ಸಂಜೆ ರಂಗಕುಣಿತ ನಿರಂತರವಾಗಿ ನಡೆದುಕೊಂಡು ಬಂದಿದೆ.ಏ.1ರಂದು ಜಾಗರಣೆ ಸಮರ್ಪಣೆ ನಡೆಯಿತು. ಏ.2ರಂದು ತಂಪುಜ್ಯೋತಿ ಸಮರ್ಪಣೆ ನಡೆಯಲಿದೆ. ಏ.3ರಂದು ಹಬ್ಬದ ಪ್ರಮುಖ ಭಾಗವಾಗಿರುವ ಬಾಯಿಬೀಗ ಕಾರ್ಯಕ್ರಮ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಹಾಗೂ ಗಡಿಭಾಗದ ತಮಿಳುನಾಡಿನಿಂದಲೂ ಸಾವಿರಾರು ಭಕ್ತರು ಆಗಮಿಸಿ ಬಾಯಿಬೀಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಏ.4ರಂದು ಬೆಳಿಗ್ಗೆ ಸೂರ್ಯೋದಯಕ್ಕೆ ಸರಿಯಾಗಿ ಅಗ್ನಿಕುಂಡ ದರ್ಶನ ನೆರವೇರಲಿದೆ.

ಭಕ್ತರಿಗಾಗಿ ಕುಡಿಯುವ ನೀರು ಪೂರೈಸಲು ಟ್ಯಾಂಕರ್‌ಗಳ ವ್ಯವಸ್ಥೆ ಸೇರಿದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)