ಭಾನುವಾರ, ಮೇ 9, 2021
26 °C

ಮಾರಿಗದ್ದಿಗೆ: ಎರಡು ತಲೆ ಹಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ಬೆಲೆ ಬಾಳುವ ಹಾವು ಎಂದು ವದಂತಿ ಇದ್ದ ಎರಡು ತಲೆ ಹಾವನ್ನು ಪಟ್ಟಣದ ಮಾರಿಗದ್ದಿಗೆ ವೃತ್ತದಲ್ಲಿ ಗುರುವಾರ ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ಒಂದು ವಾರದಿಂದ ಮಾರಿಗದ್ದಿಗೆ ವೃತ್ತದ ಅಂಗಡಿಗಳ ಮುಂಭಾಗ ಮತ್ತು ಚರಂಡಿಯಲ್ಲಿ ಓಡಾಡಿಕೊಂಡಿದ್ದ ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದರು.ಮಾರಿಗದ್ದಿಗೆ ವೃತ್ತದಲ್ಲಿ ಒಂದು ತಿಂಗಳಿನಿಂದ ಚರಂಡಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅಲ್ಲಿಯೂ ಹಾವು ಕಾಣಿಸಿಕೊಂಡಿತ್ತು ಎಂದು ಪುರಸಭೆ ಸಿಬ್ಬಂದಿ ತಿಳಿಸಿದ್ದಾರೆ. `ಮಣ್ಣುಮುಕ್ಕ~ ಎಂದು ಕರೆಯುವ ಎರಡು ತಲೆ ಹಾವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಐಶ್ವರ್ಯ ವೃದ್ಧಿಸುತ್ತದೆ, ಶತ್ರುಭಾದೆ ನಿವಾರಣೆಯಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಹಾವಿನ ಬೇಡಿಕೆ ಹೆಚ್ಚಿತ್ತು. ಇದರಿಂದಾಗಿ ಅನೇಕ ಮಂದಿ ರಾತ್ರಿವೇಳೆ ಹಾವು ಹಿಡಿಯಲು ಯತ್ನಿಸಿದ್ದರು.ತರೀಕೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಗುರುವಾರ ವಶಕ್ಕೆ ತೆಗೆದುಕೊಂಡರು. ನಗರ ಅರಣ್ಯಪಾಲಕ ಟೀಕೇಶ್ವರ್, ಸಿಬ್ಬಂದಿ ಭೀಮರಾಯಪ್ಪ, ಸತ್ಯನಾರಾಯಣ್, ನಾಗರಾಜ್‌ನಾಯ್ಕ ಹಾವನ್ನು ಸೆರೆ ಹಿಡಿದರು.ಗ್ರಾಮೀಣ ಕ್ರೀಡಾಕೂಟ 6ಕ್ಕೆ

ಕಡೂರು:
ಸಹಾಯಕ ಯುವಜನಾ ಸೇವಾ ಇಲಾಖೆ ಇದೇ 6ರಂದು ಕಲ್ಲೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ದಸರಾ ಕ್ರೀಡಾಕೂಟ ಏರ್ಪಡಿಸಿದೆ.ಇದೇ 7ರಂದು ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. 16 ವರ್ಷದೊಳಗಿನ ಗ್ರಾಮೀಣ ಪ್ರದೇಶದ ಮಕ್ಕಳು ಜನ್ಮದಿನಾಂಕ ದೃಢೀಕರಣದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಬಹುದು. ವಿವರಗಳಿಗೆ ದೂ. 99015 45725 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.