ಮಂಗಳವಾರ, ನವೆಂಬರ್ 19, 2019
27 °C

ಮಾರಿಷಸ್ ಪ್ರವಾಸ ರೋಡ್ ಷೋ

Published:
Updated:

ವಿಶ್ವದ ಪ್ರಸಿದ್ಧ ಮಧುಚಂದ್ರ ತಾಣ ಮಾರಿಷಸ್‌ನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ಪ್ರವಾಸೋದ್ಯಮ ವಿಸ್ತರಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಬೆಂಗಳೂರು ಮತ್ತು ಅಹಮದಾಬಾದ್‌ಗಳ ನಡುವೆ  ರೋಡ್ ಷೋ ಆಯೋಜಿಸಿತ್ತು.ಐಟಿ ಉದ್ಯೋಗಿಗಳ ತಾಣವಾದ ಬೆಂಗಳೂರಿನ ಯುವಕರು ರಜೆ ಕಳೆಯುವ ನೆಚ್ಚಿನ ತಾಣಗಳಲ್ಲಿ ಮಾರಿಷಸ್ ಒಂದಾಗಿದ್ದು ಇಂತಹ ಪ್ರವಾಸಿಗಳನ್ನು ಸೆಳೆಯುವ ಉದ್ದೇಶದಿಂದ ಈ ರೋಡ್ ಷೋ ನಡೆಸಲಾಗಿದೆ ಎಂದು ಮಾರಿಷಸ್ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ಹೇಳಿದೆ.ಮಾರಿಷಸ್‌ನ ಸುಂದರ ಕಡಲ ತೀರ ಮತ್ತು ನೈಸರ್ಗಿಕ ಸೌಂದರ್ಯದ ಜೊತೆ ರಜೆ ಕಳೆಯ ಬಯಸುವವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು  ಅಲ್ಲಿನ ನಿಸರ್ಗನಿರ್ಮಿತ ಜಲಪಾತ, ವಿಸ್ತಾರವಾದ ಕಡಲತೀರ, ಬಂದರು, ಸಮುದ್ರ ವಿಹಾರ, ಸ್ಪಾ ಅನುಭವ, ಡಾಲ್ಫಿನ್‌ನನ್ನು ಹತ್ತಿರದಿಂದ ನೋಡುವ ರೋಮಾಂಚನ, ಸಮುದ್ರವನ್ನು ಸುತ್ತುವರಿದ ಅದ್ಬುತ ಶೈಲಿಯ ಕಟ್ಟಡಗಳು, ಸಫಾರಿಯಲ್ಲಿ ಪ್ರಾಣಿಗಳ ಮುಖಾಮುಖಿ; ಇಷ್ಟೇ ಅಲ್ಲ, ಅಲ್ಲಿನ ವಿಶಿಷ್ಟ ಖಾದ್ಯಗಳನ್ನೂ ಸವಿಯಬಹುದಾಗಿದೆ.ಮಾಹಿತಿಗಾಗಿ www.tourism-mauritius.mu ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಪ್ರತಿಕ್ರಿಯಿಸಿ (+)