ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ

7

ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ

Published:
Updated:

ಬೆಂಗಳೂರು: ನಗರದ ಐಟಿಐ ಬಡಾವಣೆಯ ಕೃಷ್ಣ ಪದವಿಪೂರ್ವ ಕಾಲೇಜಿನ ಸುಮಾರು ಸಾವಿರ ವಿದ್ಯಾರ್ಥಿಗಳು ಸೋಮವಾರ ಕೆ.ಆರ್‌. ಮಾರುಕಟ್ಟೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳ ಹಲವು ತಂಡಗಳನ್ನು ರಚಿಸಿ, ಆಯಾ ತಂಡದಲ್ಲಿ ಗ್ಯಾಂಗ್‌ಮ್ಯಾನ್‌ಗಳು, ಪೌರಕಾರ್ಮಿಕರು ಸೇರಿಕೊಂಡು ಸಿಟಿ ಮಾರುಕಟ್ಟೆಯನ್ನು ಶುಚಿಗೊಳಿಸಿದರು. ಕಸವನ್ನು ಸಾಗಿಸಲು ಲಾರಿಗಳು, ಆಟೊ ಟಿಪ್ಪರ್‌ಗಳಲ್ಲಿ ಸಾಗಿಸಲಾಯಿತು. ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ಉಪಮೇಯರ್‌ ಇಂದಿರಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry