ಬುಧವಾರ, ಜೂನ್ 16, 2021
23 °C

ಮಾರುಕಟ್ಟೆ ಮಾಯೆ: ವಾಹನ, ಆರೋಗ್ಯ ವಿಮೆ ಇನ್ನಷ್ಟು ದುಬಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರುಕಟ್ಟೆ ಮಾಯೆ: ವಾಹನ, ಆರೋಗ್ಯ ವಿಮೆ ಇನ್ನಷ್ಟು ದುಬಾರಿ!

ವಾಹನ ಮತ್ತು ಆರೋಗ್ಯದಂತಹ ಸಾಮಾನ್ಯ ವಿಮೆ ಮಾಡುವ ಸಂಸ್ಥೆಗಳಿಗೆ ನಷ್ಟ ಹೆಚ್ಚುತ್ತಿರುವುದರಿಂದ ಗ್ರಾಹಕರಿಂದಲೇ ಹೆಚ್ಚಿನ ಪ್ರೀಮಿಯಂ ಪಡೆದುಕೊಂಡು ನಷ್ಟ ತಗ್ಗಿಸಿಕೊಳ್ಳಬೇಕು ಎಂದು ಹಣಕಾಸು ಸಚಿವಾಲಯವು ಇತ್ತೀಚೆಗೆ ಜನರಲ್ ಇನ್ಶುರನ್ಸ್ ಕಾರ್ಪೊರೇಷನ್‌ಗೆ (ಜಿಐಸಿ) ಪತ್ರ ಬರೆದಿದೆ.ವಾಹನ ವಿಮೆ ರೂಪದಲ್ಲಿ ಬರುತ್ತಿರುವ ಪ್ರೀಮಿಯಂಗಿಂತ ಶೇ 120ರಷ್ಟು ವಿಮಾ ಮೊತ್ತವನ್ನು  ಸಂಸ್ಥೆಗಳು ನೀಡಬೇಕಾಗುತ್ತದೆ. ಆರೋಗ್ಯ ವಿಮೆಯಲ್ಲಿ ಸಹ ಪ್ರೀಮಿಯಂಗಿಂತ ಶೇ 103ರಷ್ಟು ಹೆಚ್ಚಿನ ಹಣವನ್ನು ಕಂಪೆನಿಗಳು ವ್ಯಯಿಸುತ್ತಿವೆ.ಹೀಗಾಗಿ ನಷ್ಟದ ಹೆಚ್ಚಿನ ಬಾಬತ್ತನ್ನು ಇನ್ನು ಮುಂದೆ ವಿಮಾ ಕಂಪೆನಿಗಳು ಹೊತ್ತುಕೊಳ್ಳುವುದು ಬೇಡ, ಅದನ್ನು  ಚಂದಾದಾರರಿಗೆ ವರ್ಗಾಯಿಸಿ ಎಂಬುದು ಸರ್ಕಾರದ ಸಲಹೆ. ಸರ್ಕಾರದ ಸಲಹೆ ಇಷ್ಟಕ್ಕೇ ಕೊನೆಗೊಂಡಿಲ್ಲ, ನಷ್ಟದಲ್ಲಿರುವ ಕಂಪೆನಿಗಳ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಮಾಡಿಸದಂತೆ ಹಾಗೂ ಕಮಿಷನ್ ಪ್ರಮಾಣವನ್ನು ಶೇ 5ಕ್ಕೆ ಇಳಿಸುವಂತೆ ಸಹ ಸಲಹೆ ನೀಡಿದೆ. ಸರ್ಕಾರದ ಈ ಸೂಚನೆಗಳು ಜಾರಿಗೆ ಬಂದರೆ ವಾಹನ, ಆರೋಗ್ಯ ವಿಮಾ ಪ್ರೀಮಿಯಂ ಮೊತ್ತ ಹೆಚ್ಚುವುದು ನಿಶ್ಚಿತ ಎಂದು ವಿಮಾ ತಜ್ಞರು ಅಂದಾಜಿಸಿದ್ದಾರೆ.`ಸಿಇಒ~ ಸರಾಸರಿ ವೇತನ ರೂ 2 ಕೋಟಿ

ಭಾರತದ್ಲ್ಲಲಿರುವ ವಿವಿಧ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ವಾರ್ಷಿಕ ಸರಾಸರಿ ವೇತನ ರೂ 2 ಕೋಟಿ ಮೀರಿದ್ದು, ಇದು ಕಂಪೆನಿಗಳ ಇತರ ಹಿರಿಯ ಕಾರ್ಯನಿರ್ವಾಹಕರ ಒಟ್ಟಾರೆ ವೇತನಕ್ಕಿಂತ 2.6ರಷ್ಟು ಅಧಿಕ ಎಂಬುದು ಜಾಗತಿಕ ಮ್ಯಾನೇಜ್‌ಮೆಂಟ್ ಸಲಹಾ ಸಂಸ್ಥೆ `ಹೇ ಗ್ರೂಪ್~ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.ಕಂಪೆನಿಗೆ ತಗುಲುವ ವೆಚ್ಚದ (ಸಿಟಿಸಿ) ಆಧಾರದಲ್ಲಿ ಈ ಲೆಕ್ಕಾಚಾರ ಮಾಡಲಾಗಿದೆ. ಸಿಟಿಸಿಯಲ್ಲಿ ವೇತನ, ಬೋನಸ್, ಕಮಿಷನ್, ಹಣಮರುಪಾವತಿ ಹಾಗೂ ಇತರ ಹಲವು ಸೌಲಭ್ಯಗಳು ಸೇರುತ್ತವೆ. ದೊಡ್ಡ ಮತ್ತು ಸಂಕೀರ್ಣ ಕಂಪೆನಿಗಳಲ್ಲಿನ ಸಿಇಒಗಳ ವೇತನ   ವರ್ಷಕ್ಕೆ ಸರಾಸರಿ ್ಙ 7 ಕೋಟಿಗಿಂತ ಅಧಿಕ ಇದೆ ಎಂಬುದೂ ಗೊತ್ತಾಗಿದೆ.

ಅಧ್ಯಯನದಿಂದ ದೇಶದ ತಲಾ ಆದಾಯದ ವಿವರವೂ ಲಭ್ಯವಾಗಿದೆ. ಸದ್ಯ ದೇಶದ ತಲಾ ಆದಾಯ ರೂ 50 ಸಾವಿರದಷ್ಟಿದ್ದು, ಈ ಹಣಕಾಸು ವರ್ಷದ ಅಂತ್ಯದ ವೇಳೆದ ರೂ 60 ಸಾವಿರ ರೂಪಾಯಿಗೆ ಹೆಚ್ಚುವ ಸಾಧ್ಯತೆ ಇದೆ ಎಂದು ಹೇ ಗ್ರೂಪ್‌ನ ಶ್ರೀಧರ ಗಣೇಶನ್ ತಿಳಿಸಿದ್ದಾರೆ.`ಬಾಸ್~ ವಿರುದ್ಧ ದೂರು

~ನನ್ನ ಬಾಸ್ ಏನೂ ಪ್ರಯೋಜನ ಇಲ್ಲ, ಅವರಿಂದಾಗಿಯೇ ನಾನು ಕಂಪೆನಿ ಬಿಟ್ಟು ಬೇರೆ ಕಂಪೆನಿ ಸೇರುವಂತಾಗಿದೆ. ಅವರಿಗೆ ನಾಯಕತ್ವ ಗುಣ ಇಲ್ಲ, ಅವರಿಗಿಂತ ನಾನೇ ಚೆನ್ನಾಗಿ ಸಂಸ್ಥೆಯನ್ನು ಮುನ್ನಡೆಸಬಲ್ಲೆ...~ ಹೀಗೆ ಜಗತ್ತಿನ ನಾನಾ ಭಾಗಗಳಲ್ಲಿ ಉದ್ಯೋಗಿಗಳು    ಅಭಿಪ್ರಾಯ ಹೊಂದಿರುವುದು ಅಧ್ಯಯನವೊಂದರಿಂದ ಗೊತ್ತಾಗಿದೆ.ಡಿಡಿಐ ಹೆಸರಿನ ಪ್ರತಿಭಾ ನಿರ್ವಹಣಾ ಸಂಸ್ಥೆ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡ, ಚೀನಾ, ಭಾರತ, ಜರ್ಮನಿ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಪುರಗಳಲ್ಲಿನ ಮ್ಯಾನೇಜ್‌ಮೆಂಟ್ ಹೊರತಾದ ಹುದ್ದೆಗಳಲ್ಲಿನ 1,250 ಮಂದಿ ಕಾಯಂ ಉದ್ಯೋಗಿಗಳನ್ನು ಮಾತನಾಡಿಸಿ ನಡೆಸಿದ ಅಧ್ಯಯನದಿಂದ ಈ ವಿಷಯ ಗೊತ್ತಾಗಿದೆ.ಬಾಸ್ ಸರಿಯಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ತಾವು ಕಂಪೆನಿ ಬಿಡುತ್ತಿರುವುದಾಗಿ ಶೇ 68 ಮಂದಿ ಹೇಳಿದ್ದನ್ನು ಅಧ್ಯಯನ ಕಂಡುಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.