ಮಾರುಕಟ್ಟೆ ಮಾಯೆ

7

ಮಾರುಕಟ್ಟೆ ಮಾಯೆ

Published:
Updated:

ಕ್ಷೀಣಿಸುತ್ತಿರುವ ದಕ್ಷತೆ

ಭಾರತದಲ್ಲಿ ಕಾರ್ಖಾನೆ ಕಾರ್ಮಿಕರ ಸರಾಸರಿ ವೇತನ ಹೆಚ್ಚುತ್ತಿದೆ. ಆದರೆ, ಅವರ ಕಾರ್ಯದಕ್ಷತೆ ಕ್ಷೀಣಿಸುತ್ತಿದೆ ಎಂದು  ಸರ್ಕಾರ ನಡೆಸಿದ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. 2007-08 ಹಾಗೂ 2008-09ರ ಅವಧಿಯಲ್ಲಿ ಕಾರ್ಖಾನೆ ಕಾರ್ಮಿಕರ  ವಾರ್ಷಿಕ ವೇತನವು ಶೇ 9 ಕ್ಕಿಂತಲೂ ಅಂದರೆ ರೂ 68,103 ಗಳಷ್ಟು ಹೆಚ್ಚಿದೆ ಎಂದು ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯಲ್ಲಿ (ಎಎಸ್‌ಐ)ತಿಳಿಸಲಾಗಿದೆ.ಫಾಸ್ಟ್‌ಫುಡ್: ತ್ವರಿತ ಬೆಳವಣಿಗೆ

ದೇಸಿ ಹಾಗೂ ವಿದೇಶಿ ರುಚಿಯನ್ನು ಮಿಳಿತಗೊಳಿಸುವ ಮೂಲಕ ಫಾಸ್ಟ್‌ಫುಡ್ ಉದ್ದಿಮೆ ಕಳೆದ ಕೆಲವು ವರ್ಷಗಳಿಂದ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ವಿದೇಶಗಳಿಗೆ ತೆರಳುವ ಭಾರತೀಯರ ‘ಅಭಿರುಚಿ’ ಕೂಡ ಬದಲಾಗಿದೆ. ಆಹಾರ-ವಿಹಾರದಲ್ಲಿಯೂ ಅವರು ಈ ಬದಲಾವಣೆ ಬಯಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ‘ ಫಾಸ್ಟ್‌ಫುಡ್ ಮಾರುಕಟ್ಟೆ ಎಲ್ಲೆಡೆ ವಿಸ್ತರಿಸಿರುವುದರಿಂದ  2010 ರಲ್ಲಿ ನಮ್ಮ ವಹಿವಾಟು ಶೇ 20ರಷ್ಟು ಹೆಚ್ಚಿದೆ’ ಎನ್ನುತ್ತಾರೆ ಮೆಕ್‌ಡೊನಾಲ್ಡ್ ಇಂಡಿಯಾ (ನಾತ್ ಆ್ಯಂಟ್ ಈಸ್ಟ್) ವ್ಯವಸ್ಥಾಪಕ ನಿರ್ದೇಶಕ ವಿಕ್ರಂ ಬಕ್ಷಿ.ಹಣಕಾಸು ಸಾಕ್ಷರತೆ

ಹಣಕಾಸು ಸಾಕ್ಷರತೆಗೆ ಸಂಬಂಧಿಸಿದಂತೆ ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯರೇ ಹೆಚ್ಚು ಅರಿವು ಹೊಂದಿದ್ದಾರೆ. ಈ ದಿಸೆಯಲ್ಲಿ ಮುಂಚೂಣಿಯಲ್ಲಿರುವ ಒಟ್ಟು 10 ದೇಶಗಳ ಪೈಕಿ ಭಾರತವು ಎರಡನೇ ಸ್ಥಾನದಲ್ಲಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ.ಬಹುತೇಕ ಭಾರತೀಯರು ತಮ್ಮ ಹಣಕಾಸು ವ್ಯವಹಾರಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಾರೆ. ಅಲ್ಲದೇ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸುವ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಭಾರತ, ಅಮೆರಿಕ, ಮೆಕ್ಸಿಕೊ, ನೆದರ್‌ಲ್ಯಾಂಡ್, ರೋಮೆನಿಯಾ, ಪೋಲೆಂಡ್, ಬೆಲ್ಜಿಯಂ, ಸ್ಪೇನ್, ಕೊರಿಯಾ ಹಾಗೂ ಜಪಾನ್ ದೇಶಗಳ ಸುಮಾರು 5,000 ಗ್ರಾಹಕರನ್ನು ಸಮೀಕ್ಷೆ ಮಾಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry