ಮಾರುಕಟ್ಟೆ ಮಾಯೆ

ಶುಕ್ರವಾರ, ಜೂಲೈ 19, 2019
26 °C

ಮಾರುಕಟ್ಟೆ ಮಾಯೆ

Published:
Updated:

ಸುಳ್ಳು ಮಾಹಿತಿ

`ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು~ ಎನ್ನೋ ಗಾದೆ ಮಾತನ್ನು ಕೊಂಚ ಬದಲಾಯಿಸಿ `ಸಾವಿರ ಸುಳ್ಳು ಹೇಳಿ ಒಂದು ಕೆಲಸ ಗಿಟ್ಟಿಸಿಕೊ~ ಎಂದು ಹೇಳೋ ಕಾಲ ಇದು. ಶಿಕ್ಷಣ, ರಿಯಲ್ ಎಸ್ಟೇಟ್, ಪ್ರವಾಸ...ಇತರೇ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಸೇರುವವರು ಉದ್ಯೋಗದಾತರಿಗೆ ತಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡುವ ಪ್ರಕರಣಗಳು ಹೆಚ್ಚುತ್ತಿವೆ.2011 ರ ಮೊದಲ ತ್ರೈಮಾಸಿಕದಲ್ಲಿ ಈ ಟ್ರೆಂಡ್ ಹೆಚ್ಚಾಗಿತ್ತು ಎಂದು `ಫಸ್ಟ್ ಅಡ್ವಾಂಟೆಜ್ ಕಾರ್ಪೋರೇಶನ್~ ವರದಿಯಲ್ಲಿ ಹೇಳಲಾಗಿದೆ. ಅಭ್ಯರ್ಥಿಗಳ ಉದ್ಯೋಗಪೂರ್ವ ಹಿನ್ನೆಲೆಯನ್ನು ಪರಿಶೀಲಿಸಿದಾಗ ಈ ಅಂಶಗಳು ಬೆಳಕಿಗೆ ಬಂದಿವೆ.  ಬ್ಯಾಟರಿ ಚಾಲಿತ ಸ್ಪ್ರೇಯರ್ 

 ಬೆಳೆಗಳಿಗೆ ದ್ರಾವಣ ಸಿಂಪಡಣೆ ಮಾಡುವ ರೈತರಿಗೆ ಅತ್ಯಂತ ಸುಧಾರಿತ, ದ್ರಾವಣ  ವ್ಯಯಮಾಡದ ಮತ್ತು ಬ್ಯಾಟರಿ ಬಳಕೆಯಿಂದ ಸುಲಭವಾಗಿ ನಿರ್ವಹಿಸಬಹುದಾದ ಸ್ಪ್ರೇಯರ್‌ಗಳನ್ನು  ರತ್ನಗಿರಿ ಇಂಪೆಕ್ಸ್ ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಇದು ಬಳಸಲು ಅತ್ಯಂತ ಹಗುರ. ಬ್ಯಾಟರಿ ಚಾರ್ಜ್ ಮುಗಿಯುವವರೆಗೂ ಒಂದೇ ರೀತಿಯ ಕಾರ್ಯಕ್ಷಮತೆ ಕಾಯ್ದುಕೊಳ್ಳುತ್ತದೆ. ಒಮ್ಮೆ ಚಾರ್ಜ್ ಮಾಡಿದ ಬ್ಯಾಟರಿ ಸಹಾಯದಿಂದ ಅಂದಾಜು 350 ರಿಂದ 375 ಲೀಟರ್ ದ್ರಾವಣ ಸಿಂಪಡಣೆ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. ಮಾಹಿತಿಗೆ 94483 96893 ಸಂಪರ್ಕಿಸಿ.5 ಕೋಟಿಗೂ ಅಧಿಕ ತೆರಿಗೆದಾರರು...

ಪ್ರಸಕ್ತ ಹಣಕಾಸು ವರ್ಷದಲ್ಲಿ 5 ಕೋಟಿಗೂ ಅಧಿಕ ಮಂದಿ ತೆರಿಗೆ ಪಾವತಿ ಮಾಡಲಿದ್ದಾರೆಂದು ಅಂದಾಜಿಸಲಾಗಿದೆ. ಇವರಲ್ಲಿ ಎರಡು ಕೋಟಿ ಮಂದಿ ಆನ್‌ಲೈನ್ ಮೂಲಕ ತೆರಿಗೆ ಕಟ್ಟುವ ಸಾಧ್ಯತೆ ಇದೆ ಎಂದು  ಆನ್‌ಲೈನ್ ಟ್ಯಾಕ್ಸ್ ಸರ್ವಿಸ್ ಪೋರ್ಟಲ್ ಹೇಳಿದೆ.            

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry