ಬುಧವಾರ, ಮೇ 12, 2021
22 °C

ಮಾರುಕಟ್ಟೆ ಮಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ರೂಪೆ~ ಬಿಡುಗಡೆ

 ವೀಸಾ ಮಾಸ್ಟರ್ ಕಾರ್ಡ್ ಆದ `ರೂಪೆ~ ಕಾರ್ಡ್‌ಗೆ ವರ್ಗಾವಣೆಗೊಳ್ಳುವುದರಿಂದ ಸ್ವದೇಶಿ ಬ್ಯಾಂಕುಗಳು ವ್ಯವಹಾರ ಶುಲ್ಕದಲ್ಲಿ ವಾರ್ಷಿಕ ರೂ 300 ಕೋಟಿ ಉಳಿತಾಯ ಮಾಡಬಹುದು ಎಂದು ಕಾರ್ಡ್ ಚಾಲನೆಗೆ ತಂದಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ (ಎನ್‌ಪಿಸಿಐ) ತಿಳಿಸಿದೆ.`ವಿದೇಶಿ ಕಾರ್ಡ್‌ಗಳಾದ ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗೆ ನೀಡುವುದಕ್ಕಿಂತಲೂ ರೂಪೆ  ಕಾರ್ಡ್‌ಗಳ ದರ ಶೇ 40ರಷ್ಟು ಕಡಿಮೆಯಾಗಲಿರುವುದರಿಂದ ಸ್ವದೇಶಿ ಬ್ಯಾಂಕುಗಳು  ರೂ250-300 ಕೋಟಿ ಲಾಭಗಳಿಸಬಹುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ. ಪಿ. ಹೋಟಾ ತಿಳಿಸಿದ್ದಾರೆ.

 

ಹಲವು ವರ್ಷಗಳ ಪರಿಶ್ರಮದ ಬಳಿಕ ಎನ್‌ಪಿಸಿಐ  ರೂಪೆ ಕಾರ್ಡ್ ಜಾರಿಗೆ ತಂದಿದೆ. ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಯುಬಿಐ, ಕಾರ್ಪೊರೇಷನ್ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್‌ಗಳು ರೂಪೆ  ಅಡಿ ತಮ್ಮ ಡೆಬಿಟ್ ಕಾರ್ಡ್‌ಗಳನ್ನು ಬಿಡುಗಡೆಗೊಳಿಸಿವೆ.

`ಯಾತ್ರಾ ಡಾಟ್ ಕಾಂ~ ರಿಯಾಯಿತಿ

 ಆನ್‌ಲೈನ್ ಟ್ರಾವೆಲ್ ಪೋರ್ಟಲ್ ಯಾತ್ರಾಡಾಟ್‌ಕಾಮ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಜತೆ ಸೇರಿಕೊಂಡು  ಶಾಪಿಂಗ್ ಕಾರ್ಡ್ ಜಾರಿಗೆ ತಂದಿದ್ದು ಇದರಿಂದ  ಪ್ರವಾಸಿಗರು ಹಲವಾರು ರಿಯಾಯ್ತಿ ಪಡೆಯಲಿದ್ದಾರೆ.ಈ ಹೊಸ ಕಾರ್ಡ್‌ಗೆ ಗ್ರಾಹಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬ ಭರವಸೆ ಹೊಂದಿದ್ದೇವೆ ಎಂದು ಯಾತ್ರಾ ಡಾಟ್‌ಕಾಮ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಧ್ರುವ್ ಸಿಂಗ್ ತಿಳಿಸಿದ್ದಾರೆ.ಕಾರ್ಡ್ ಬಳಸಿದಂತೆಲ್ಲ ಪಾಯಿಂಟ್ ಗಳಿಸುವ ಅವಕಾಶ ಇರುವುದರಿಂದ ಹೆಚ್ಚೆಚ್ಚು  ಸ್ವೈಪ್ ಮಾಡಿದಂತೆಲ್ಲ ಪ್ರವಾಸಿಗರು ಹೆಚ್ಚು ಲಾಭ ಪಡೆಯುತ್ತಾರೆ. `ಬದುಕನ್ನು ಸರಳಗೊಳಿಸಿ~ ಎಂಬ ತತ್ವದ ಮೇಲೆ ಈ ಕಾರ್ಡ್ ಅನ್ನು ರೂಪಿಸಲಾಗಿದೆ  ಎಂದು ಎಸ್‌ಬಿಐ ತಿಳಿಸಿದೆ.

ವೇತನ ಹೆಚ್ಚಳದಲ್ಲಿ ಕುಸಿತ

 ನಿಧಾನಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಕಳೆದ ಬಾರಿಯ ಶೇ 12ಕ್ಕೆ ಹೋಲಿಸಿದಲ್ಲಿ ಈ ಬಾರಿ ನೌಕರರ ವೇತನ ಹೆಚ್ಚಳ ಪ್ರಮಾಣ ಶೇ 11ರಷ್ಟಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

 

ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 400 ಕಂಪೆನಿಗಳು ಭಾಗವಹಿಸಿದ್ದವು. ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಕಳೆದ ಹಣಕಾಸು ವರ್ಷದ ಎರಡು ತ್ರೈಮಾಸಿಕ ಅವಧಿಯಲ್ಲಿ ಕಂಡುಬಂದ ಹಣದುಬ್ಬರದಿಂದಾಗಿ ವ್ಯವಹಾರ ಕ್ಷೇತ್ರ ಅಷ್ಟೇನೂ ಪ್ರಗತಿ ಕಂಡಿಲ್ಲ. ಹೀಗಾಗಿ ವೇತನ ಹೆಚ್ಚಳ ಪ್ರಮಾಣ ಕಡಿಮೆಯಾಗಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.