ಮಾರುತಿ ಕಾರು: ಬೆಲೆ ಏರಿಕೆ ಸಾಧ್ಯತೆ!

7

ಮಾರುತಿ ಕಾರು: ಬೆಲೆ ಏರಿಕೆ ಸಾಧ್ಯತೆ!

Published:
Updated:

ನವದೆಹಲಿ (ಪಿಟಿಐ): ದೇಶದ ಪ್ರಮುಖ ಹಾಗೂ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ `ಮಾರುತಿ ಸುಜುಕಿ ಇಂಡಿಯಾ' ತನ್ನ ಉತ್ಪನ್ನದ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಜನವರಿ ತಿಂಗಳಿನಿಂದ ಸುಮಾರು 20ಸಾವಿರ ರೂ.ಗಳವರೆಗೆ ಏರಿಸುವ ಸೂಚನೆಯನ್ನು ಹೊರಹಾಕಿದೆ.ಕ್ವಾಂಟಮ್ ಮಾದರಿ ಕಾರಿನ ಬೆಲೆಯನ್ನು ರೂ. 20ಸಾವಿರಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಮಾರ್ಕೆಟಿಂಗ್ ಮತ್ತು ಮಾರಾಟ) ಮಯಾಂಕ್ ಪರೀಕ್ ತಿಳಿಸಿದ್ದಾರೆ.ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿಯುತ್ತಿರುವುದರಿಂದ ಹಾಗೂ ಕಾರಿನ ಬಿಡಿಭಾಗಗಳು ಸೇರಿದ್ದಂತೆ ಕಚ್ಚಾ ಸಾಮಗ್ರಿಗಳ ಬೆಲೆಗಳು ಹೆಚ್ಚಿರುವುದರಿಂದಾಗಿ ಕಾರುಗಳ ಬೆಲೆ ಏರಿಕೆಯು ಅನಿವಾರ್ಯ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry