ಮಾರುತಿ ಮಾನ್ಪಡೆ ಆರೋಪ:ಭೂಸುಧಾರಣೆ ಕಾಯ್ದೆಗೆ ಧನಿಕರ ರಕ್ಷಣೆ

7

ಮಾರುತಿ ಮಾನ್ಪಡೆ ಆರೋಪ:ಭೂಸುಧಾರಣೆ ಕಾಯ್ದೆಗೆ ಧನಿಕರ ರಕ್ಷಣೆ

Published:
Updated:

ಹರಪನಹಳ್ಳಿ: ಭೂರಹಿತ ಕುಟುಂಬಗಳ ಹಿತರಕ್ಷಣೆಯ ಆಶಯ ಹೊಂದಿರುವ 1961ರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ನಿರ್ಧಾರದ ಹಿಂದೆ ಉಳ್ಳವರ ಮಡಿಲಿಗೆ ಭೂಒಡೆತನ ಒಪ್ಪಿಸುವ ಸಂಚು ಅಡಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದರು.ಬುಧವಾರ ಇಲ್ಲಿನ ಹಳೇ ಬಸ್‌ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂ), ಬಗರ್‌ಹುಕುಂ ಸಾಗುವಳಿದಾರರ ಹಾಗೂ ನಿವೇಶನರಹಿತರ ಹೋರಾಟ ಸಮಿತಿಗಳ ಆಶ್ರಯದಲ್ಲಿ ಬೀದರ್‌ನಿಂದ, ಬೆಂಗಳೂರುವರೆಗೆ ಆರಂಭಗೊಂಡಿರುವ ಭೂಮಿಗಾಗಿ ಹೋರಾಟ ಜಾಥಾದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಯು. ಬಸವರಾಜ, ಮುಖಂಡರಾದ ವೆಂಕಟೇಶ್ ಬೇವಿನಹಳ್ಳಿ, ಯಂಕಪ್ಪ, ಬಸವರಾಜ, ಅಪ್ಪಣ್ಣ, ಹಾಲೇಶ ನಾಯ್ಕ, ವೆಂಕಟೇಶ, ರೇಣುಕಮ್ಮ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry