ಮಾರುತಿ ಸುಜುಕಿ: ಮುಷ್ಕರ ಅಂತ್ಯ

7

ಮಾರುತಿ ಸುಜುಕಿ: ಮುಷ್ಕರ ಅಂತ್ಯ

Published:
Updated:

ಗುಡಗಾಂವ್ (ಪಿಟಿಐ): ದೇಶದ ಅತಿದೊಡ್ಡ ವಾಹನ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿಯ ಮಾನೆಸರ್ ಘಟಕದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದ್ದ ಕಾರ್ಮಿಕರ ಮುಷ್ಕರ ಶುಕ್ರವಾರ ಅಂತ್ಯಗೊಂಡಿದೆ.ಸಂಸ್ಥೆಯ ಆಡಳಿತ ಮಂಡಳಿ, ಹರಿಯಾಣ ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳ ಮಧ್ಯೆ ಆಗಿರುವ ತ್ರೀಪಕ್ಷೀಯ ಒಪ್ಪಂದದ ಫಲವಾಗಿ ಮುಷ್ಕರ ಕೊನೆಗೊಂಡಿದೆ.ಈ ಘಟಕದಲ್ಲಿ ಪ್ರತಿ ದಿನ 1,200 ವಾಹನಗಳು ತಯಾರಾಗುತ್ತಿದ್ದು, ಕಾರ್ಮಿಕರು ಈ ತಿಂಗಳ 7ರಿಂದ ಮುಷ್ಕರ ನಡೆಸುತ್ತಿದ್ದರು. ಈ ಮೊದಲಿನ ಮುಷ್ಕರದ ಕಾರಣಕ್ಕೆ ಅಮಾನತುಗೊಂಡಿದ್ದ 44 ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲು ಒತ್ತಾಯಿಸಿ ಈ ಮುಷ್ಕರ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry