ಸೋಮವಾರ, ಜೂನ್ 21, 2021
30 °C

ಮಾರೆಮ್ಮನಿಗೆ ಶುಭ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಕಿಕ್ಕಿರಿದು ಸೇರಿದ್ದ ಭಕ್ತಜನ ಸಾಗರದ ನಡುವೆ ಬುಧವಾರ ಮಾರಿ ಕಾಂಬಾ ದೇವಿಯ ಮಂಗಲ ಮಹೋ ತ್ಸವದೊಂದಿಗೆ ದ್ವೈ ವಾರ್ಷಿಕ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ತೆರೆ ಕಂಡಿತು.ಬೆಳಿಗ್ಗೆ 10.30ಗಂಟೆವರೆಗೂ ಜನರು ಸರದಿಯಲ್ಲಿ ನಿಂತು ಮಾರ ಮ್ಮನಿಗೆ ಪೂಜೆ ಸಲ್ಲಿಸಿದರು. ದೇವ ಸ್ಥಾನದ ಬಾಬುದಾರರ ಕೊನೆಯ ಪೂಜೆಯ ನಂತರ ಬಿಡಕಿಬೈಲಿನ ಗ್ದ್ದದುಗೆ ಆವಾರದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಜರುಗಿದವು. ದೇವಿ ಕುಳಿತ ಮಂಟಪ ವಿಸರ್ಜಿಸಿ ವಾಹನದ ಮೂಲಕ ದೇವಸ್ಥಾನಕ್ಕೆ ಕೊಂಡೊಯ್ಯ ಲಾಯಿತು. ಭಕ್ತರ ಜಯಕಾರದ ನಡುವೆ ದೇವಿ ಗದ್ದುಗೆಯಿಂದ ಕೆಳ ಗಿಳಿದು ಮಂಟಪದ ಮಧ್ಯೆ ಕುಳಿತಾಗ ಆಸಾದಿಯರು ಹುಲುಸು ಪ್ರಸಾದವನ್ನು ರೈತರಿಗೆ ವಿತರಣೆ ಮಾಡಿ ದರು. ರೈತರು ಅದನ್ನು ಕೊಂಡೊಯ್ದು ಗದ್ದೆ-ತೋಟ ಗಳಿಗೆ ಹಾಕಿ ಬರುವ ಸಂಪ್ರದಾಯದ ನಂತರ ಕಟ್ಟಿಗೆಯಿಂದ ವಿಶೇಷವಾಗಿ ಸಿದ್ಧಪಡಿಸಿದ ಅಟ್ಟಲಿನಲ್ಲಿ ದೇವಿ ಮಂಟಪದ ಹೊರ ಬರುತ್ತಿದ್ದಂತೆ ಜನರೆಲ್ಲ ಚಪ್ಪಾಳೆ ತಟ್ಟಿ ವಿಸರ್ಜನೆಯ ಸಂದೇಶ ನೀಡಿದರು.ನಗುಮುಖದಲ್ಲಿ ರಥಾರೂಢಳಾಗಿ ಬರುವ ದೇವಿ ಮಹಿಷಾಸುರನನ್ನು ಮರ್ದನ ಮಾಡಿ ಸಿಟ್ಟಿನಿಂದ ಹೊರ ನಡೆಯುವಳು ಎಂಬ ಧಾರ್ಮಿಕ ಕಥೆಯ ಪ್ರತೀಕವಾಗಿ ಕುಂಬಳ ಕಾಯಿಯ ಸಾತ್ವಿಕ ಬಲಿ ಅರ್ಪಣೆ ಕಾರ್ಯ ನಡೆಯಿತು. ಗದ್ದುಗೆಯಿಂದ ಅವಸರದಲ್ಲಿ ಹೊರ ಬಂದ ದೇವಿ ಅದೇ ವೇಗದಲ್ಲಿ ಹೊರ ಆವಾರದಲ್ಲಿ ನಿಂತಿರುವ ರಥದ ಸುತ್ತುವರೆದು ಗದ್ದುಗೆ ಎದುರಿನ ಬೆಂಕಿ ಹಚ್ಚಿದ ಮಾತಂಗಿ ಚಪ್ಪರ ನೋಡಿ ಮುಂದೆ ಸಾಗಿದಳು.ಈ ಸಂದರ್ಭದಲ್ಲಿ ಅನೇಕ ಭಕ್ತರು ಭಾವುಕರಾಗಿ ಕಣ್ಣೀರು ಸುರಿಸಿದರು. ನಂತರ ಬನವಾಸಿ ರಸ್ತೆಯ ವಿಸರ್ಜನಾ ಪೀಠದಲ್ಲಿ ದೇವಿ ವಿಸರ್ಜನೆ ನಡೆಯಿತು. ಮತ್ತೆ ಯುಗಾದಿಯಂದು ದೇವಾ ಲಯದಲ್ಲಿ ದೇವಿಯ ಪುನರ್ ಪ್ರತಿ ಷ್ಠಾಪನೆ ನಡೆಯಲಿದೆ. ಅಲ್ಲಿಯ ತನಕ ಶಿರಸಿ ಮಾರಿಕಾಂಬಾ ದೇವಸ್ಥಾ ನದ ಬಾಗಲು ಮುಚ್ಚಿರುತ್ತದೆ. ಎಂಟು ದಿನಗಳ ಹಿಂದೆ ದೇವಿಯ ರಥೋತ್ಸ ವಕ್ಕೆ ಆಗಮಿಸಿದಂತೆ ಮಂಗಲ ಮಹೋತ್ಸವಕ್ಕೆ ಸಹ ಅಸಂಖ್ಯ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಕೃತಾರ್ಥರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.