ಮಾರ್ಕೆಲ್‌ ಹ್ಯಾಟ್ರಿಕ್‌

7

ಮಾರ್ಕೆಲ್‌ ಹ್ಯಾಟ್ರಿಕ್‌

Published:
Updated:

ಬರ್ಲಿನ್ (ಪಿಟಿಐ): ಜರ್ಮನಿಯ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಚಾನ್ಸೆಲರ್‌ ಏಂಜೆಲಾ ಮಾರ್ಕೆಲ್‌ ನೇತೃತ್ವದ ಕ್ರಿಶ್ಚಿಯನ್‌ ಡೆಮಾಕ್ರೆಟಿಕ್‌ ಯೂನಿಯನ್‌ ಮತ್ತು ಕ್ರಿಶ್ಚಿಯನ್‌ ಸೋಷಿಯಲ್‌ ಯೂನಿಯನ್‌ ಪಕ್ಷಗಳು ಜಯ ಸಾಧಿಸಿದ್ದು, ಸ್ಪಷ್ಟ ಬಹುಮತಕ್ಕೆ ನಾಲ್ಕು ಸ್ಥಾನಗಳ ಕೊರತೆ ಇದೆ.ಮಾರ್ಕೆಲ್‌ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.ಎರಡೂ ಪಕ್ಷಗಳು ಒಟ್ಟಿಗೆ ಶೇಕಡಾ 41.7ರಷ್ಟು ಮತಗಳನ್ನು ಗಳಿಸಿವೆ. ಒಟ್ಟು 311 ಸ್ಥಾನಗಳನ್ನು ಗೆದ್ದಿರುವ ಈ ಪಕ್ಷಗಳು ಕಳೆದ ಬಾರಿಗಿಂತ ಶೇಕಡಾ ಎಂಟರಷ್ಟು ಹೆಚ್ಚು ಮತಗಳನ್ನು ಗಳಿಸುವಲ್ಲಿ ಸಫಲ ವಾಗಿವೆ.1957ರ ಚುನಾವಣೆಯನ್ನು ಹೊರತುಪಡಿಸಿದರೆ ಕ್ರಿಶ್ಚಿಯನ್‌‌ ಡೆಮಾ ಕ್ರೆಟಿಕ್‌ಯುನಿಯನ್‌ನೇತೃತ್ವದ ಒಕ್ಕೂಟವು ಯಾವತ್ತೂ ಸ್ಪಷ್ಟ ಬಹುಮತ ಪಡೆದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry