ಶನಿವಾರ, ಅಕ್ಟೋಬರ್ 31, 2020
24 °C

ಮಾರ್ಕ್ವೆಜ್‌ಗೆ ಕಂಬನಿ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಕ್ಸಿಕೊ ಸಿಟಿ(ಎಎಫ್‌ಪಿ): ಮಾಂತ್ರಿಕ ವಾಸ್ತವದ ಮೂಲಕ ಪ್ರೇಮ, ಕುಟುಂಬ ಮತ್ತು ಲ್ಯಾಟಿನ್ ಅಮೆರಿಕದ ಸರ್ವಾಧಿಕಾರಿತ್ವದ ಬಗ್ಗೆ ಮಹಾನ್ ಕೃತಿಗಳನ್ನು ರಚಿಸಿದ್ದ, ಕೊಲಂಬಿಯಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನಿಧನಕ್ಕೆ ವಿಶ್ವದಾದ್ಯಂತ ಕಂಬನಿಯ ಮಹಾಪೂರವೇ ಹರಿದು ಬಂದಿದೆ.ಮಾರ್ಕ್ವೆಜ್ ಅವರನ್ನು  ಆಪ್ತರು ‘ಗಾಬೊ‘ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ‘ಒನ್‌ ಹಂಡ್ರೆಡ್‌ ಇಯರ್ಸ್ ಆಫ್‌ ಸಾಲಿಟ್ಯೂಡ್‌’ , ‘ಲವ್‌ ಇನ್‌ ದ ಟೈಂ ಆಫ್‌ ಕಾಲರಾ’– ಇವು ಮಾರ್ಕ್ವೆಜ್ ಅವರ ಮಹತ್ವದ ಕೃತಿಗಳಲ್ಲಿ ಸೇರಿವೆ.

ಮಾರ್ಕ್ವೆಜ್ ನಿಧ­ನಕ್ಕೆ ಮೂರು ದಿನಗಳ ರಾಷ್ಟ್ರೀಯ ಶೋಕ ಘೋಷಿ­ಸಲಾಗಿದೆ.ನ್ಯೂಮೋನಿಯಾ ಕಾರಣಕ್ಕೆ ಮಾರ್ಚ್‌ 31­ರಂದು ಆಸ್ಪತ್ರೆಗೆ ದಾಖ­ಲಾಗಿದ್ದ ಮಾರ್ಕ್ವೆಜ್ ಅವರನ್ನು ಒಂದು ವಾರದ ಬಳಿಕ ಬಿಡು­ಗಡೆ ಮಾಡ­ಲಾ­ಗಿತ್ತು.ನಂತರ ಅವರು ಮೆಕ್ಸಿಕೊ ಸಿಟಿಯಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯು­ತ್ತಿದ್ದರು.ಮಾರ್ಕ್ವೆಜ್,  ಕೊಲಂ­ಬಿ­ಯಾದ ಕೆರಿ­ಬಿ­ಯನ್‌ ಕರಾ­­ವ­ಳಿಯ ಅರಕಾಟಕ ಹಳ್ಳಿ­ಯಲ್ಲಿ,  1927ರ ಮಾ.6ರಂದು  ಜನಿಸಿದರು. ಅವರ ತಂದೆ ಟೆಲಿ­ಗ್ರಾಫ್‌್ ಆಪರೇಟರ್‌್ ಆಗಿದ್ದರು. ಅಜ್ಜ–ಅಜ್ಜಿ ಮತ್ತು ಚಿಕ್ಕಮ್ಮನ ಆರೈಕೆಯಲ್ಲಿ ಮಾರ್ಕ್ವೆಜ್ ಬೆಳೆದರು.   ತಾಯ್ನಾಡಿನ ಅದ್ಭುತ ಕತೆ­ಗಳು ಅವರ ಸಾಹಿತ್ಯ ಕೃಷಿಗೆ ಸ್ಫೂರ್ತಿ ನೀಡಿದವು.   ಅವರ ಮೇರು­ಕೃತಿ ‘ಒನ್‌ ಹಂಡ್ರೆಡ್‌ ಇಯರ್ಸ್ ಆಫ್‌ ಸಾಲಿಟ್ಯೂಡ್‌’ ಜಗತ್ತಿನ 35 ಭಾಷೆಗಳಿಗೆ ಅನುವಾದವಾಗಿದ್ದು, 3 ಕೋಟಿಗೂ ಹೆಚ್ಚಿನ ಪ್ರತಿಗಳು ಮಾರಾಟವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.