ಶನಿವಾರ, ನವೆಂಬರ್ 23, 2019
17 °C

ಮಾರ್ಗದ ಸಂಖ್ಯೆ ಕೆ - 5 ವಿಸ್ತರಿಸಿ

Published:
Updated:

ಬಿ.ಎಂ.ಟಿ.ಸಿ.ಯ ಮಾರ್ಗ ಸಂಖ್ಯೆ ಕೆ - 5 ಬಸ್ಸು ಈ ಮಾರ್ಗದ ನಾಲ್ಕು ಬಸ್ಸುಗಳು ಎಚ್.ಎಸ್.ಆರ್. ಲೇಔಟ್‌ನಿಂದ ಮಲ್ಲಸಂದ್ರಕ್ಕೆ ಬಂದು ಹೋಗುತ್ತಿದೆ. ಈ ನಾಲ್ಕು ಬಸ್ಸುಗಳ ಪೈಕಿ 2 ಬಸ್ಸುಗಳು ಮುಂದಿನ ಕಿರ್ಲೋಸ್ಕರ್ ಲೇ ಔಟ್‌ಗೆ ವಿಸ್ತರಿಸಿಕೊಟ್ಟರೆ 4-6 ಹೊಸ ಬಡಾವಣೆಗಳಿಗೆ ತುಂಬಾ ಅನುಕೂಲವಾಗುತ್ತದೆ.ಈ ಮಾರ್ಗದ ಸಂಖ್ಯೆ ಕೆ - 5ರ ಪೈಕಿ ಎರಡು ಬಸ್ಸುಗಳನ್ನು ಯಶವಂತಪುರ, ಮೈಸೂರು ಸಾಬೂನು ಕಾರ್ಖಾನೆ, ಡಾ. ರಾಜ್‌ಕುಮಾರ್ ರಸ್ತೆಯ ಮೂಲಕ ಎಚ್‌ಎಸ್‌ಆರ್ ಲೇಔಟ್ ತಲುಪಿದರೆ ಇದರಿಂದ ಪ್ರತಿ ದಿನ ಶಾಲಾ ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ, ಬಡ ರೋಗಿಗಳಿಗೆ ಹಾಗೂ ಹಿರಿಯ ನಾಗರೀಕರಿಗೆ ಅನುಕೂಲವಾಗುತ್ತದೆ.ಈಗಲಾದರೂ ಸಂಬಂಧಪಟ್ಟ ಬಿ.ಎಂ.ಟಿ.ಸಿ.ಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮಾರ್ಗ ಸಂಖ್ಯೆ ಕೆ - 5 ಬಸ್ಸನ್ನು ಕಿರ್‌ಲೋಸ್ಕರ್ ಲೇ ಔಟ್ ತನಕ ವಿಸ್ತರಿಸಿಕೊಟ್ಟು ಮತ್ತು ಮಾರ್ಗ ಬದಲಾವಣೆ ಮಾಡಿಕೊಡುತ್ತೀರೆಂದು ಆಶಿಸೋಣವೇ.

 

ಪ್ರತಿಕ್ರಿಯಿಸಿ (+)