ಮಾರ್ಗಸೂಚಿ ಉಲ್ಲಂಘನೆ:ಆರೋಪ

7
ವಾಜಪೇಯಿ ನಗರ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ

ಮಾರ್ಗಸೂಚಿ ಉಲ್ಲಂಘನೆ:ಆರೋಪ

Published:
Updated:

ಗಂಗಾವತಿ: ಇಲ್ಲಿನ ನಗರಸಭೆಗೆ ಪ್ರಸಕ್ತ 2013–14ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯ 125 ಫಲಾನುಭವಿಗಳ ಆಯ್ಕೆಯಲ್ಲಿ ಮಾರ್ಗ­ಸೂಚಿ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದು, ರದ್ದಾಗುವ ಆತಂಕ ಎದುರಾಗಿದೆ.ನಗರಸಭೆಯ ಕೆಲ ಸದಸ್ಯರ ಹಸ್ತ­ಕ್ಷೇಪದಿಂದ ಮಾರ್ಗಸೂಚಿ ಉಂಲ್ಲಘಿಸ­ಲಾಗಿದೆ.  ಇದನ್ನು ಅನುಮೋದನೆಗಾಗಿ  ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ನಿಯಮ ಊಲ್ಲಂಘನೆಯನ್ನು ಗಮನಿ­ಸಿದ ಜಿಲ್ಲಾಧಿಕಾರಿ ಎರಡು ಬಾರಿ ಪಟ್ಟಿಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಜೆಡಿಎಸ್‌ನ ಆಡಳಿತ ಮಂಡಳಿ ಸದಸ್ಯರು ತಯಾರಿಸಿದ ಫಲಾನುಭವಿಗಳ ಪಟ್ಟಿಗೆ ನಗರಸಭೆಯ ವಿರೋಧ ಪಕ್ಷದ ಕಾಂಗ್ರೆಸ್ಸಿನ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಗಮನಕ್ಕೂ ತಂದು ಪಟ್ಟಿಯನ್ನು ನೀಡಿದ್ದಾರೆ. ಮೀಸಲಾತಿ ಉಲ್ಲಂಘನೆ: ಉದ್ದೇಶಿತ ಯೋಜನೆಯಲ್ಲಿ ನಗರದಲ್ಲಿ ವಾಸಿಸು­ತ್ತಿರುವ ವಸತಿ ರಹಿತ ಕಡು ಬಡತನದ ಕುಟುಂಬಕ್ಕೆ ವಸತಿ ನಿಗಮದಿಂದ ಮನೆ ಕಟ್ಟಿಕೊಳ್ಳಲು ಸರ್ಕಾರ ₨1.30 ಲಕ್ಷ ಸಹಾಯಧನ  ನೀಡುತ್ತಿದ್ದು, ಮನೆ ನಿರ್ಮಾಣದ (ಯುನಿಟ್‌) ಮೊತ್ತ ಈ ಮೊದಲಿದ್ದ ₨1.80 ಲಕ್ಷದಿಂದ ಎರಡು ಲಕ್ಷಕ್ಕೆ ಹೆಚ್ಚಳ ಮಾಡಿದೆ.ನಿಗಮದ ಮಾರ್ಗಸೂಚಿಯಂತೆ ಪರಿಶಿಷ್ಟ ಜಾತಿಗೆ ಶೇ 18, ಪಂಗಡಕ್ಕೆ ಶೇ 4.75, ಅಗವಿಕಲಕರಿಗೆ ಶೇ 5, ಮಾಜಿ ಸೈನಿಕ ಮತ್ತು ಸೈನಿಕರ ವಿಧವೆಯರಿಗೆ ಶೇ 1, ಹಿರಿಯ ನಾಗರಿಕರಿಗೆ ಶೇ 2 ಹಾಗೂ ವಿಚ್ಚೇದಿತ, ವಿಧುರರಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಬೇಕು.ಆದರೆ ನಗರಸಭೆ ಅಂತಿಮಗೊ­ಳಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಬಿಟ್ಟರೆ ಬೇರೆ ಯಾವ ವರ್ಗಕ್ಕೂ ಮೀಸಲಾತಿ ಕಲ್ಪಿಸಿಲ್ಲದಿರು­ವುದು ‘ಪ್ರಜಾವಾಣಿ’ಗೆ ದೊರೆತ ಮಾಹಿತಿಯಲ್ಲಿ ಬಹಿರಂಗವಾಗಿದೆ.ಒಂದೇ ವರ್ಗಕ್ಕೆ 71 ಮನೆ: 125 ಫಲಾನುಭವಿಗಳ ಪೈಕಿ ಅಲ್ಪ ಸಂಖ್ಯಾತ ವರ್ಗಗಳಿಗೆ ಪೈಕಿ ಆದ್ಯತೆ ನೀಡದೇ ಕೇವಲ ಒಂದೇ ಸಮುದಾಯಕ್ಕೆ ಸೇರಿದ 71 ಜನರನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.ಫಲಾನುಭವಿಗಳ ಪಟ್ಟಿಯಲ್ಲಿ ನಗರ­ಸಭೆಯ ಸದಸ್ಯರ ಪತ್ನಿಯರು, ಸದಸ್ಯೆ-­ಯರ ಪತಿಯಂದಿರು, ಸಂಬಂಧಿಕರು, ಚುನಾಯಿತ ಪ್ರತಿನಿಧಿಯೊಬ್ಬರ ವಾಹನ ಚಾಲಕನ ತಾಯಿ ಸೇರಿದಂತೆ ಆರ್ಥಿಕ ಸಬಲರನ್ನೆ ಸೇರಿಸಿ ಆಯ್ಕೆ ಮಾಡಲಾ­ಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry