ಮಾರ್ಚ್‌ನಲ್ಲಿ `ಜನವರಿ...'

7

ಮಾರ್ಚ್‌ನಲ್ಲಿ `ಜನವರಿ...'

Published:
Updated:
ಮಾರ್ಚ್‌ನಲ್ಲಿ `ಜನವರಿ...'

`ಜನವರಿ 1 ಬಿಡುಗಡೆ'- ಇದು ಚಿತ್ರವೊಂದರ ಹೆಸರು. ಜನವರಿ ತಿಂಗಳಲ್ಲೇ ತೆರೆ ಕಾಣಲು ಪ್ರಯತ್ನಿಸಿ ಹಿಂದೆ ಬಿದ್ದ ಈ ಚಿತ್ರ ಇದೀಗ ಮಾರ್ಚ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಅದಕ್ಕೆ ಕಾರಣ ಚಿತ್ರದಲ್ಲಿನ ಸಿಕ್ಕಾಪಟ್ಟೆ ಗ್ರಾಫಿಕ್ಸ್ ಕೆಲಸವಂತೆ.ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮ್ಮ ಟೈಂಟೇಬಲ್ ಏರುಪೇರಾದುದನ್ನು ವಿಷಾದದಿಂದಲೇ ಹೇಳಿಕೊಂಡ ಚಿತ್ರದ ನಿರ್ಮಾಪಕ ಯುಗಂಧರ್, `ಇಪ್ಪತ್ತು ನಿಮಿಷದ ಗ್ರಾಫಿಕ್ಸ್ ಕೆಲಸ ನಮ್ಮ ಯೋಜನೆಯನ್ನು ಬುಡಮೇಲು ಮಾಡಿತು' ಎಂದರು.

ಹೆಸರಿಗೆ ತಕ್ಕಂತೆ ಜನವರಿಯಲ್ಲಿ ಸಿನಿಮಾ ಬಿಡುಗಡೆ ಆಗದಿದ್ದರೂ ನಿರ್ದೇಶಕ ವರ್ಮಾ ಶ್ರೀನಿವಾಸ್ ಅವರಿಗೆ ತಮ್ಮ ಚಿತ್ರದ ಬಗ್ಗೆ ಭರವಸೆ ಇದೆ.ದೀಪಕ್ `ಜನವರಿ 1 ಬಿಡುಗಡೆ' ಸಿನಿಮಾದ ನಾಯಕ. ಮೊದಲ ಬಾರಿಗೆ ಖಾಕಿ ತೊಟ್ಟು ನಟಿಸಿರುವ ಖುಷಿ ಅವರದು. ಪೂಜಾ ಗಾಂಧಿ ಅವರಿಗೆ ಚಿತ್ರದಲ್ಲಿ ಕ್ರೈಮ್ ವರದಿಗಾರ್ತಿ ಪಾತ್ರವಂತೆ. `ಚಿತ್ರದಲ್ಲಿ ಇರುವ ನಿಗೂಢ ಪ್ರೇಕ್ಷಕರಿಗೆ ಹೊಸತು ಎನಿಸಲಿದೆ' ಎಂಬುದು ಅವರ ಅನಿಸಿಕೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry