ಸೋಮವಾರ, ಡಿಸೆಂಬರ್ 16, 2019
25 °C

ಮಾರ್ಚ್‌ನಲ್ಲಿ ಜಹೀರ್ ಖಾನ್- ಇಶಾ ಶೆರ್ವಾನಿ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್‌ನಲ್ಲಿ ಜಹೀರ್ ಖಾನ್- ಇಶಾ ಶೆರ್ವಾನಿ ವಿವಾಹ

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಹೀರ್ ಖಾನ್ ತಮ್ಮ ಬಹುಕಾಲದ ಗೆಳತಿ ಹಾಗೂ ಬಾಲಿವುಡ್ ನಟಿ ಇಶಾ ಶೆರ್ವಾನಿ ಅವರನ್ನು ಮಾರ್ಚ್‌ನಲ್ಲಿ ವಿವಾಹವಾಗಲಿದ್ದಾರೆ.33 ವರ್ಷ ವಯಸ್ಸಿನ ಜಹೀರ್ ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿಂದ ಹಿಂತಿರುಗಿದ ಮೇಲೆ ವಿವಾಹ ನಡೆಯಲಿದೆ. ಬಿಡುವಿಲ್ಲದ ಕ್ರಿಕೆಟ್ ಕಾರಣ ಮಾರ್ಚ್‌ನಲ್ಲೂ ಸಾಧ್ಯವಾಗದಿದ್ದರೆ ಅಕ್ಟೋಬರ್‌ನಲ್ಲಿ ಖಚಿತ ಎಂದು ಮೂಲಗಳು ತಿಳಿಸಿವೆ.27 ವರ್ಷ ವಯಸ್ಸಿನ ಇಶಾ ಅವರನ್ನು ಜಹೀರ್ ಮೊದಲು ಭೇಟಿಯಾಗಿದ್ದು 2005ರಲ್ಲಿ. ಇಶಾ ಆಗಸ್ಟೇ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಸುಭಾಷ್ ಘಾಯ್ ನಿರ್ದೇಶನದ `ಕಿಸ್ನಾ~ ಅವರ ಮೊದಲ ಸಿನಿಮಾ.

ಆದರೆ ಎರಡು ವರ್ಷಗಳ ಪ್ರಣಯದ ಬಳಿಕ ಜಹೀರ್ ಹಾಗೂ ಇಶಾ ನಡುವೆ ಬಿರುಕು ಏರ್ಪಟ್ಟಿತ್ತು. 2010ರಲ್ಲಿ ಅವರು ಮತ್ತೆ ಒಂದುಗೂಡಿದರು. ಅಲ್ಲಿಂದ ಅವರ ಪ್ರಣಯದ ಪಯಣ ಜೋರಾಗಿಯೇ ಸಾಗಿದೆ.

ಪ್ರತಿಕ್ರಿಯಿಸಿ (+)