ಶನಿವಾರ, ಅಕ್ಟೋಬರ್ 19, 2019
28 °C

ಮಾರ್ಚ್ ಅಂತ್ಯಕ್ಕೆ ಎಫ್‌ಎಂ

Published:
Updated:

ಭದ್ರಾವತಿ: ಇಲ್ಲಿನ ಆಕಾಶವಾಣಿ ಮಾರ್ಚ್ ಅಂತ್ಯದ ವೇಳೆಗೆ ಎಫ್‌ಎಂ ರೇಡಿಯೋ ಕಾರ್ಯಾರಂಭ ಮಾಡಲಿದ್ದು, ಇದಕ್ಕೆ ಈಚೆಗೆ ಭೇಟಿ ನೀಡಿದ್ದ ತಾಂತ್ರಿಕ ತಂಡದ ಅನುಮತಿ ಸಹ ದೊರೆತಿದೆ. ಕೆಲವು ದಿನದ ಹಿಂದೆ ನವದೆಹಲಿ ಆಕಾಶವಾಣಿ ಕೇಂದ್ರ ಮುಖ್ಯ ಎಂಜಿನಿಯರ್ ದಿಕ್ಷೀತ್ ನೇತೃತ್ವದ ತಂಡ ಇಲ್ಲಿನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಎಫ್‌ಎಂ ಚಾಲನೆಗೆ ಒಲವು ತೋರಿದೆ.ಈಗ್ಗೆ ಆರು ವರ್ಷದ ಹಿಂದೆಯೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಎಫ್‌ಎಂ ಕೇಂದ್ರ ಸ್ಥಾಪನೆಗಾಗಿ ಟವರ್ ಹಾಗೂ ತಾಂತ್ರಿಕ ಪರಿಕರದ ವಿಶೇಷ ಹವಾನಿಯಂತ್ರಿತ ಕೊಠಡಿ ಈ ಯೋಜನೆಗೆ ಸಿದ್ಧವಾಗಿತ್ತು.ಆದರೂ ಕೆಲವು ತಾಂತ್ರಿಕ ಕಾರಣಗಳು ಯೋಜನೆಯ ಕಾರ್ಯದ ಮುಂದುವರಿಕೆಗೆ ಅಡ್ಡಿಯಾಗಿದ್ದವು. ಈಗ ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ ಮಾರ್ಚ್ ಅಂತ್ಯದ ವೇಳೆಗೆ 1ಕೆವಿ ಸಾಮರ್ಥ್ಯದ ತರಂಗಾಂತರಂಗ ಮೂಲಕ ಎಫ್‌ಎಂ ಆರಂಭವಾಗಲಿದೆ.ಪ್ರಾರಂಭದಲ್ಲಿ ಶಿವಮೊಗ್ಗ- ಭದ್ರಾವತಿ ವ್ಯಾಪ್ತಿಯ ಶ್ರೋತೃಗಳಿಗೆ ಲಭ್ಯವಾಗುವ ಈ ಸೌಲಭ್ಯ ಕ್ರಮೇಣ 10ಕೆವಿ ಸಾಮರ್ಥ್ಯಕ್ಕೆ ಹೆಚ್ಚಾದಲ್ಲಿ 50ರಿಂದ 60ಕಿ.ಮೀ ವ್ಯಾಪ್ತಿ ಪ್ರದೇಶಕ್ಕೆ ಇದರ ವಿಸ್ತಾರ ಹೆಚ್ಚಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಒಟ್ಟಿನಲ್ಲಿ ದಶಕದ ಕನಸಿನ ಎಫ್‌ಎಂ ಕೇಳುಗರ ಮನಸ್ಸಿನ ಹೋರಾಟಕ್ಕೆ ಅಂತೂ ಇಂತೂ 2012ರ ಮಾರ್ಚ್ ಅಂತ್ಯಕ್ಕೆ ಸಿಹಿ ಸುದ್ದಿ ದೊರೆಯುವ ಸಾಧ್ಯತೆ ಇದೆ ಎಂಬುದು ಸದ್ಯಕ್ಕೆ ದೊರೆತಿರುವ ಮಾಹಿತಿ.    

Post Comments (+)