ಮಾರ್ಚ್ ಅಂತ್ಯದವರೆಗೂ ಶಿಕ್ಷಕರಿಗೆ ನಿವೃತ್ತಿ ಇಲ್ಲ

7

ಮಾರ್ಚ್ ಅಂತ್ಯದವರೆಗೂ ಶಿಕ್ಷಕರಿಗೆ ನಿವೃತ್ತಿ ಇಲ್ಲ

Published:
Updated:

ಬೆಂಗಳೂರು: ಈ ವರ್ಷದ ಸೆಪ್ಟೆಂಬರ್‌ನಿಂದ 2014ರ ಫೆಬ್ರುವರಿವರೆಗೆ ನಿವೃತ್ತಿಯಾಗುವ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳ ಬೋಧಕ ಸಿಬ್ಬಂದಿಯ ಸೇವೆಯನ್ನು 2014ರ ಮಾರ್ಚ್ ಅಂತ್ಯದವರೆಗೂ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಿವೃತ್ತಿಯಾದರೆ ಬೋಧನಾ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ, ಮಾರ್ಚ್‌ವರೆಗೆ ಸೇವಾವಧಿಯನ್ನು ವಿಸ್ತರಿಸಲಾಗಿದೆ.ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ಈ ಆದೇಶ ಅನ್ವಯವಾಗಲಿದೆ. ಈ ತಿಂಗಳಿಂದ ಫೆಬ್ರುವರಿ ವರೆಗೆ ನಿವೃತ್ತಿಯಾಗಲಿರುವ ಬೋಧಕ ಸಿಬ್ಬಂದಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಮಾರ್ಚ್ ಅಂತ್ಯದವರೆಗೂ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry