ಬುಧವಾರ, ಮೇ 25, 2022
31 °C

ಮಾರ್ಚ್ ಅಂತ್ಯದೊಳಗಾಗಿ ತೆರಿಗೆ ಪಾವತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ, ಆಸ್ತಿ ಹೊಂದಿದ ಎಲ್ಲ ಮಾಲೀಕರು ಆಸ್ತಿ ಕರ ಹಾಗೂ ಇತರ ತೆರಿಗೆಗಳನ್ನು ಪಾಲಿಕೆಗೆ ಸಂದಾಯ ಮಾಡಿಲ್ಲ. ಅದಲ್ಲದೆ ಆಸ್ತಿ ಕರವನ್ನು ಎಸ್.ಎ.ಎಸ್. ಪದ್ಧತಿಯ ಮೂಲಕ ತಪ್ಪು ಮಾಹಿತಿ ನೀಡಿ ಅಂದರೆ ವಾಣಿಜ್ಯ, ಬಾಡಿಗೆಗಾಗಿ ಉಪಯೋಗಿಸುತ್ತಿದ್ದು, ‘ವಸತಿಗಾಗಿ’ ಎಂದು ಕರ ಪಾವತಿಸಿ ತಮ್ಮ ಆಸ್ತಿಯ ಉಪ ಯೋಗದ ಕುರಿತು ಪಾಲಿಕೆಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.ಇಂಥ ಆಸ್ತಿಗಳ ಪರಿಶೀಲನೆ ಕಾರ್ಯವನ್ನು ತನಿಖಾ ತಂಡದಿಂದ ಖುದ್ದಾಗಿ ಸ್ಥಳ ವೀಕ್ಷಣೆಯ ಮೂಲಕ ಅಳತೆ ಮಾಡಿಸಿ, ನಿಖರವಾದ ಮಾಹಿತಿಯನ್ನು ಪಡೆಯ ಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತ ಮನೋಜ್ ಜೈನ್  ತಿಳಿಸಿದ್ದಾರೆ.ಸ್ಥಳ ವೀಕ್ಷಣೆಗಾಗಿ 6 ಸಿಬ್ಬಂದಿಯುಳ್ಳ ತನಿಖಾ ತಂಡದವರು ತನಿಖೆ ಪ್ರಾರಂಭಿಸಿದಾಗ ಆ ತಂಡಕ್ಕೆ ಸಹಕಾರ ನೀಡಲು ಕೋರಲಾಗಿದೆ. ತನಿಖಾ ಸಮಯದಲ್ಲಿ ತಪ್ಪು ಮಾಹಿತಿ ನೀಡಿದ್ದಲ್ಲಿ ಅಥವಾ ಆಸ್ತಿ ತೆರಿಗೆ ವಂಚನೆ ಮಾಡಿದ್ದು ಕಂಡು ಬಂದಲ್ಲಿ ಅಂಥ ಮಾಲೀಕರ ವಿರುದ್ಧ ಕಾಯ್ದೆಯಡಿ ಶಿಸ್ತಿನ ಕ್ರಮ ಜರುಗಿಸಿ ದಂಡ ವಿಧಿಸುವುದು ಮತ್ತು ಬಡ್ಡಿಯೊಂದಿಗೆ ದ್ವಿಗುಣ ಆಸ್ತಿ ಕರ ಪಾವತಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಅನೇಕ ಖಾಲಿ ನಿವೇಶನಗಳು ವಾರಸುದಾರರು ಇಲ್ಲದೇ ಮಾಲೀಕತ್ವ ಕಂಡುಬಂದಿಲ್ಲ. ಅಂಥ ನಿವೇಶನ ಹೊಂದಿದ ಮಾಲೀಕರು ತಮ್ಮ ನಿವೇಶನಗಳನ್ನು ಪಾಲಿಕೆಯ ಆಸ್ತಿ ವಹಿಯಲ್ಲಿ ಮಾರ್ಚ್ ಅಂತ್ಯದೊಳಗಾಗಿ ನೋಂದಣಿ ಮಾಡಿಸಲು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಒಂದು ವೇಳೆ ವಿಫಲವಾದಲ್ಲಿ ಅಂತಹ ಖಾಲಿ ನಿವೇಶನಗಳನ್ನು ಪಾಲಿಕೆಯ ಸ್ವತ್ತುಎಂದು ಪರಿಗ ಣಿಸಲು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.