ಮಾರ್ಚ್ 2ಕ್ಕೆ ಹಾರಕೂಡ ಚನ್ನಬಸವ ಶಿವಯೋಗಿ ರಥೋತ್ಸವ

7

ಮಾರ್ಚ್ 2ಕ್ಕೆ ಹಾರಕೂಡ ಚನ್ನಬಸವ ಶಿವಯೋಗಿ ರಥೋತ್ಸವ

Published:
Updated:

ಚಿಂಚೋಳಿ: ಕಲ್ಯಾಣ ನಾಡಿನ ಆರಾಧ್ಯದೇವ ಮಹಾ ಮಹಿಮಾ ಪುರುಷ ಹಾರಕೂಡದ ಚನ್ನಬಸವ ಶಿವಯೋಗಿಗಳ 61ನೇ ಜಾತ್ರಾ ಮಹೋತ್ಸವ ಪಟ್ಟಣದ ಶ್ರೀಮಠದಲ್ಲಿ ಆರಂಭವಾಗಿದ್ದು, ಮಾರ್ಚ್ 2ರಂದು ಶುಕ್ರವಾರ ಸಂಜೆ 6.30ಕ್ಕೆ ಪಂಚಲಿಂಗೇಶ್ವರ ಬುಗ್ಗಿ ಹತ್ತಿರದ ತೇರ್ ಮೈದಾನದಲ್ಲಿ ವೈಭವದ ರಥೋತ್ಸವ ನಡೆಯಲಿದೆ.ಬುಧವಾರದಿಂದ ರಥೋತ್ಸವದ ವರೆಗೆ ಪ್ರತಿದಿನ ಸಂಜೆ 8 ಗಂಟೆಗೆ ಶ್ರೀಮಠದಲ್ಲಿ ವೀರೇಶ್ವರ ಪುಣ್ಯಾಶ್ರಮ ಗದಗನ ಪಂ. ಮಡಿವಾಳಯ್ಯ ಶಾಸ್ತ್ರೀಗಳು ಜೇರಟಗಿ ಅವರಿಂದ ಶ್ರೀ ಯಡಿಯೂರ ಸಿದಲಿಂಗೇಶ್ವರ ಪುರಾಣ ಪ್ರವಚನ ನಡೆಯುತ್ತಿದೆ. ಗದಗನ ವೀರೇಶ ಕಿತ್ತೂರು ಅವರಿಂದ ಸಂಗೀತ, ಸಿದ್ದಣ್ಣ ದೇಸಾಯಿ ಕಲ್ಲೂರು ಅವರಿಂದ ತಬಲಾ ಸೇವೆ ನಡೆಯಲಿದೆ.ಮಾರ್ಚ್ 1ರಂದು ಗುರುವಾರಬೆಳಿಗ್ಗೆ 11ಗಂಟೆಗೆ ತೇರ್ ಮೈದಾನದಲ್ಲಿ ಗಾಳಿಪಟ ಉತ್ಸವ, ಸಂಜೆ 5 ಗಂಟೆಗೆ ಪಲ್ಲಕ್ಕಿ ಹಾಗೂ ಉಚ್ಚಾಯಿ ಮೆರವಣಿಗೆ ವಾದ್ಯಮೇಳ ಹಾಗೂ ವಿವಿಧ ಭಜನಾ ಮಂಡಳಿಯ ಕಲಾ ಸೇವೆ ಮತ್ತು ಪುರವಂತರ ಶಸ್ತ್ರ ಪ್ರಯೋಗದೊಂದಿಗೆ ಏರ್ಪಡಿಸಲಾಗಿದೆ.ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಸುಮಂಗಲೆಯರ ಕುಂಭಾಭಿಷೇಕ, 10 ಗಂಟೆಗೆ ತಾತನವರ ತೊಟ್ಟಿಲು, 11ರಿಂದ 12 ಗಂಟೆವರೆಗೆ ರಂಗೋಲಿ ಹಾಗೂ ವಚನ ಗಾಯನ ಸ್ಪರ್ಧೆ, ಸಾಯಂಕಾಲ ಪ್ರಸಾದ ವಿತರಣೆ, ಸಂಜೆ 6.30ಕ್ಕೆ ರಥೋತ್ಸವ, ಮದ್ದು ಸುಡುವುದು, 7 ಗಂಟೆಗೆ ನಡೆಯುವ ಶಿವಾನುಭವ ಚಿಂತನ ಕಾರ್ಯಕ್ರಮದ ಸನ್ನಿದಾನ ನಾಲವಾರ್ ಕೋರಿ ಸಿದ್ದೇಶ್ವರ ಸಂಸ್ಥಾನದ ಸಿದ್ಧತೋಟೇಂದ್ರ ಶಿವಾಚಾರ್ಯರು ವಹಿಸಲಿದ್ದು, ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಲಿದೆ.ಶಾಸಕ ಸುನೀಲ ವಲ್ಯ್‌ಪುರ ಅಧ್ಯಕ್ಷತೆ ವಹಿಸಿದರೆ, ಮುಖ್ಯ ಅತಿಥಿಗಳಾಗಿ ಮಾಜಿ ಸಿ.ಎಂ ಹಾಗೂ ಬೀದರ್ ಸಂಸದ ಎನ್. ಧರ್ಮಸಿಂಗ್, ಸಚಿವ ರೇವುನಾಯಕ್ ಬೆಳಮಗಿ, ಮಾಜಿ ಸಚಿವ ವೈಜನಾಥ ಪಾಟೀಲ್, ಜಿ.ಪಂ. ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ, ಮಾಜಿ ಶಾಸಕ ಕೈಲಾಸನಾಥ ಪಾಟೀಲ್, ಬಾಬುರಾವ್ ಚವ್ಹಾಣ, ಜಿ.ಪಂ. ಮಾಜಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಆಗಮಿಸಲಿದ್ದಾರೆ.ಶ್ರೀಮಠದ ಪರಂಪರೆಯಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡುವ ಗುರುರಕ್ಷೆಯ ಸತ್ಕಾರಕ್ಕೆ ಕನಕಪೂರದ ಚನ್ನವೀರಪ್ಪ ಗುಡ್ಡಾ ದಂಪತಿ ಹಾಗೂ ನಿವೃತ್ತ ಶಿಕ್ಷಕ ಚಂದ್ರಪ್ಪ ಮಜ್ಜಗಿ ಭಾಜನರಾಗಲಿದ್ದಾರೆ.  

ಹಾರಕೂಡ ಚನ್ನಬಸವೇಶ್ವರ ಪ್ರಾಥಮಿಕ, ಪ್ರೌಢ ಶಾಲೆಯ ಮಕ್ಕಳಿಂದ ಮತ್ತು ಗಾನಯೋಗಿ ಪಂಚಾಕ್ಷರಿ ಕಲಾ ಸಂಘದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.ಶನಿವಾರ ಬೆಳಿಗ್ಗೆ8 ಗಂಟೆಗೆ ಪೈಲ್ವಾನರ ಜಂಗಿ ಕುಸ್ತಿ, 12 ಗಂಟೆಗೆ ಉತ್ತಮ ಪಶುಗಳ ಪ್ರದರ್ಶನ ಸಂಜೆಗೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಳೆದ ವರ್ಷ ಜಾತ್ರಾ ಮಹೋತ್ಸವದಲ್ಲಿ ಗಾಳಿಪಟ ಉತ್ಸವ ಹೊಸದಾಗಿ ಸೇರ್ಪಡೆಯಾದರೆ, ಪ್ರಸಕ್ತ ವರ್ಷ ಉತ್ತಮ ಪಶುಗಳ ಪ್ರದರ್ಶನ (ಸ್ಪರ್ಧೆ) ಸೇರ್ಪಡೆ ಗೊಂಡಿದೆ. ಮಾರ್ಚ್ 2ರಿಂದ 4ವರೆಗೆ ಜಾತ್ರೆಯ ಅಂಗವಾಗಿ ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ ಎಂಬ ಸಾಮಾಜಿಕ ನಾಟಕ ಅಭಿನಯ ಹವ್ಯಾಸಿ ಕಲಾವಿದರ ಸಂಘದ ಅಧ್ಯಕ್ಷ ಶಾಮರಾವ್ ಕೊರವಿ ಸಾರಥ್ಯದಲ್ಲಿ           ನಡೆಸಲಿದ್ದಾರೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry