ಮಾರ್ಚ್ 2ರಿಂದ ವೈನ್ ಉತ್ಸವ

7

ಮಾರ್ಚ್ 2ರಿಂದ ವೈನ್ ಉತ್ಸವ

Published:
Updated:

ಬೆಂಗಳೂರು: ದ್ರಾಕ್ಷಿ ಮತ್ತು ವೈನ್ ಉದ್ಯಮದಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ರಾಜ್ಯ ಸರ್ಕಾರಿ ಸ್ವಾಮ್ಯದ `ಕರ್ನಾಟಕ ವೈನ್ ಮಂಡಳಿ~ಯು ಮಾರ್ಚ್ 2ರಿಂದ 4ರವರೆಗೆ ನಗರದ ಅರಮನೆ ಮೈದಾನದ ಆವರಣದಲ್ಲಿ `ಅಂತರರಾಷ್ಟ್ರೀಯ ವೈನ್ ಉತ್ಸವ- 2012~ ಅನ್ನು ಏರ್ಪಡಿಸಿದೆ.ದ್ರಾಕ್ಷಿ ಬೆಳೆಗಾರರು, ವೈನ್ ತಯಾರಿಸುವ (ವೈನರಿ) ಉದ್ದಿಮೆದಾರರು ಮತ್ತು ಗ್ರಾಹಕರಿಗೆ ಸಂಪರ್ಕ ವೇದಿಕೆಯಾಗಲಿರುವ ಈ ಉತ್ಸವದಲ್ಲಿ 10 ಜಾಗತಿಕ ವೈನ್ ಕಂಪೆನಿಗಳು ಸೇರಿದಂತೆ 50ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿವೆ ಎಂದು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ದೇಶದಲ್ಲಿ ಪ್ರತಿ ವರ್ಷ 1.3 ಲಕ್ಷ ಲೀಟರ್‌ಗಳಷ್ಟು ವೈನ್ ತಯಾರಾಗುತ್ತಿದೆ. ದೇಶದ ಒಟ್ಟು ವೈನ್ ವಹಿವಾಟು ರೂ1,000 ಕೋಟಿ ಗಳಷ್ಟಿದೆ. ಅದರಲ್ಲಿ ಕರ್ನಾಟಕದ ಪಾಲು ರೂ 100 ಕೋಟಿ ಮಾತ್ರ~ ಎಂದು ಹೇಳಿದ ಅವರು, `ದ್ರಾಕ್ಷಿ ಬೆಳೆಯುವ ಪ್ರದೇಶದ ಲೆಕ್ಕದಲ್ಲಿ ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.ಇಳುವರಿ ಲೆಕ್ಕದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 69 ವೈನರಿಗಳಿವೆ, ರಾಜ್ಯದಲ್ಲಿ 14 ವೈನರಿಗಳಿದ್ದು, ಇನ್ನು 4 ಸದ್ಯದಲ್ಲೇ ಪ್ರಾರಂಭವಾಗಲಿವೆ~ ಎಂದರು.ವೈನ್ ಪಾರ್ಕ್: `ವೈನ್ ತಯಾರಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯ ಹಾಗೂ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಲು ವಿಜಾಪುರದಲ್ಲಿ ವೈನ್ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ 141 ಎಕರೆ ಜಾಗವನ್ನು ಮಂಡಳಿಯ ಸ್ವಾಧೀನಕ್ಕೆ ಎರಡು ತಿಂಗಳ ಹಿಂದಷ್ಟೇ ಪಡೆಯಲಾಗಿದೆ. ದೇಶದ ಪ್ರಥಮ ವೈನ್ ಪಾರ್ಕ್ ಇದಾಗಲಿದೆ~ ಎಂದು ಅವರು ಹೇಳಿದರು.`ರಾಜ್ಯದಲ್ಲಿ 180 ವೈನ್ ಮಾರಾಟ ಮಳಿಗೆಗಳಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ~ ಎಂದು ಹೇಳಿದ ಅವರು, `ದ್ರಾಕ್ಷಿಯಿಂದಲೇ ತಯಾರಾದ ವೈನ್ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮದ್ಯದಂಗಡಿಯಲ್ಲಿ ಸಿಗುವ ಕೆಲವು ವೈನ್‌ಗಳಲ್ಲಿ ಕೃತಕ ಆಲ್ಕೋಹಾಲ್ ಸೇರಿಸಲಾಗಿರುತ್ತದೆ. ಅದನ್ನು ವೈನ್ ಮಳಿಗೆಗಳಲ್ಲಿ ಮಾರಾಟ ಮಾಡುವುದಿಲ್ಲ~ ಎಂದು  ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry