ಮಾಲಿಂಗ ಟ್ವೆಂಟಿ-20 ವಿಶ್ವಕಪ್ ರಾಯಭಾರಿ

7

ಮಾಲಿಂಗ ಟ್ವೆಂಟಿ-20 ವಿಶ್ವಕಪ್ ರಾಯಭಾರಿ

Published:
Updated:
ಮಾಲಿಂಗ ಟ್ವೆಂಟಿ-20 ವಿಶ್ವಕಪ್ ರಾಯಭಾರಿ

ದುಬೈ (ಪಿಟಿಐ): ವೇಗದ ಬೌಲರ್ ಲಸಿತ್ ಮಾಲಿಂಗ ಅವರನ್ನು ಸೆಪ್ಟೆಂಬರ್ 18ರಿಂದ ಅಕ್ಟೋಬರ್ ಏಳರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಈ ನಿರ್ಧಾರ ಪ್ರಕಟಿಸಿದೆ. `ಮಾಲಿಂಗ ಅವರ ಕೌಶಲ್ಯ, ಬೌಲಿಂಗ್ ಶೈಲಿ ಹಾಗೂ ಜನಪ್ರಿಯತೆಯನ್ನು ಗುರುತಿಸಿ ಈ ಗೌರವ  ನೀಡಲಾಗಿದೆ~ ಎಂದು ಐಸಿಸಿ ಹೇಳಿದೆ.

`ಈ ಗೌರವ ನನಗೆ  ಲಭಿಸಿರುವುದು ತುಂಬಾ ಖುಷಿ ನೀಡಿದೆ. ಈ ಚಾಂಪಿಯನ್‌ಷಿಪ್‌ನ ಯಶಸ್ವಿಗೆ ಎಲ್ಲರ ನೆರವು ಅಗತ್ಯ~ ಎಂದು ಶ್ರೀಲಂಕಾದ ಬೌಲರ್ ಮಾಲಿಂಗ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry