ಮಾಲಿನಿ: ಪುನರ್ ನೇಮಕ ಆದೇಶ

7

ಮಾಲಿನಿ: ಪುನರ್ ನೇಮಕ ಆದೇಶ

Published:
Updated:

ಬೆಂಗಳೂರು: ವಿಧಿವಿಜ್ಞಾನಗಳ ಪ್ರಯೋಗಾಲಯದ ಸಹಾಯಕ ನಿರ್ದೇಶಕರ ಹುದ್ದೆಯಿಂದ ಡಾ. ಮಾಲಿನಿ ಅವರನ್ನು ತೆರವು ಮಾಡಿದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಸೋಮವಾರ ಅನೂರ್ಜಿತಗೊಳಿಸಿದೆ. ಸರ್ಕಾರವು ವಿವೇಚನೆಯಿಲ್ಲದೆ ಅವರನ್ನು ಹುದ್ದೆಯಿಂದ ತೆರವುಗೊಳಿಸಿದೆ ಎಂದು ಹೈಕೋರ್ಟ್ ಹೇಳಿದೆ.ಮಾಲಿನಿ ಅವರನ್ನು ಆ ಹುದ್ದೆಗೆ ಪುನಃ ನೇಮಕ ಮಾಡಬೇಕು ಎಂದು ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ನ್ಯಾಯಮೂರ್ತಿ ಬಿ. ಮನೋಹರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.ಅವರು ತಮ್ಮ ಜನ್ಮ ದಿನಾಂಕ ಕುರಿತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ, 2009ರ ಫೆಬ್ರುವರಿ 28ರಂದು ಸೇವೆಯಿಂದ ತೆರವುಗೊಳಿಸಿ ಸರ್ಕಾರ ಆದೇಶಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry